ವಿಪ್ರೋ ಲೆಕ್ಕಪತ್ರ: 426 ಕೋಟಿ ರು.ನಿವ್ವಳ ಲಾಭ, ಶೇ.56ರ ಜಿಗಿತ
ವಿಪ್ರೋ ಲೆಕ್ಕಪತ್ರ: 426 ಕೋಟಿ ರು.ನಿವ್ವಳ ಲಾಭ, ಶೇ.56ರ ಜಿಗಿತ
2110.1 ಕೋಟಿ ರುಪಾಯಿ ಆದಾಯ, ಶೇ.39ರ ಹೆಚ್ಚಳ ದಾಖಲು
ಪ್ರಸಕ್ತ ವಿತ್ತ ವರ್ಷದ ಮೂರನೇ ತ್ರೆೃಮಾಸಿಕದ ಲೆಕ್ಕಪತ್ರಗಳನ್ನು ಜನವರಿ 21ರ ಶುಕ್ರವಾರ ವಿಪ್ರೋ ಪ್ರಕಟಿಸಿತು. ಕಳೆದ ವಿತ್ತವರ್ಷದ ಇದೇ ತ್ರೆೃಮಾಸಿಕದಲ್ಲಿ 274.3 ಕೋಟಿ ರುಪಾಯಿ ನಿವ್ವಳ ಲಾಭ ್ಫಗಳಿಸಿದ್ದ ವಿಪ್ರೋ, ಈ ಬಾರಿ 426.8 ಕೋಟಿ ರುಪಾಯಿ ನಿವ್ವಳ ಲಾಭ ಗಳಿಕೆಯಾಂದಿಗೆ ಶೇ.56ರ ಪ್ರಗತಿ ಸಾಧಿಸಿದೆ.
ಒಟ್ಟು 2110.1 ಕೋಟಿ ರುಪಾಯಿ ಆದಾಯ ದಾಖಲಾಗಿದ್ದು , ಈ ಪ್ರಮಾಣ ಕಳೆದ ವಿತ್ತವರ್ಷದ ಮೂರನೇ ತ್ರೆೃಮಾಸಿಕದಲ್ಲಿ 1521.4 ಕೋಟಿ ರುಪಾಯಿಗಳಾಗಿತ್ತು . ಇದರೊಂದಿಗೆ ವಿಪ್ರೋ ತನ್ನ ಆದಾಯದಲ್ಲಿ ಶೇ.39ರ ಹೆಚ್ಚಳದ ಖುಷಿಯಲ್ಲಿದೆ.
ನಾವು ನಮ್ಮ ಸಾಧನೆಯನ್ನು ಮುಂದುವರಿಸಿದ್ದೇವೆ ಎಂದು ಕಂಪನಿಯ ಪ್ರಗತಿಯ ಬಗ್ಗೆ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ಸಂತಸ ವ್ಯಕ್ತಪಡಿಸಿದ್ದಾರೆ. 2005ರ ಜನವರಿ-ಮಾರ್ಚ್ ತ್ರೆೃಮಾಸಿಕದಲ್ಲಿ ಜಾಗತಿಕ ಐಟಿ ಸೇವೆಗಳಿಂದ ಅಂದಾಜು 370 ಮಿಲಿಯನ್ ಡಾಲರ್ ಗಳಿಸುವ ಗುರಿಯಿದೆ ಎಂದು ಪ್ರೇಂಜಿ ಹೇಳಿದ್ದಾರೆ.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications