ಬೆನ್ನಿ ಸಮ್ಮೋಹಿನಿಗೆ ಸರ್ಪಗಾವಲು ; ಭದ್ರತೆಗಾಗಿ 10000 ಪೊಲೀಸರು

ಬೆನ್ನಿ ಸಮ್ಮೋಹಿನಿಗೆ ಸರ್ಪಗಾವಲು ; ಭದ್ರತೆಗಾಗಿ 10000 ಪೊಲೀಸರು
ವಿವಿಧ ಸಂಘಟನೆಗಳಿಂದ ಬೆಂಗಳೂರು ಬಂದ್‌

ಬೆಂಗಳೂರು : ಶುಕ್ರವಾರ(ಜ.21) ಸಂಜೆ 5ಗಂಟೆಯಿಂದ ಬೆನ್ನಿಹಿನ್‌ ಸಮ್ಮೋಹಿನಿ ಆರಂಭ. ಮೂರು ದಿನಗಳ ‘ಭಾರತಕ್ಕಾಗಿ ಪ್ರಾರ್ಥಿಸಿ-ಆಶೀರ್ವಾದದ ಹಬ್ಬ’ಕ್ಕೆ ಈಗಾಗಲೇ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಬೆಂಗಳೂರಿಗೆ ಆಗಮಿಸಿದ್ದಾರೆ. ಅಹಿತಕರ ಘಟನೆ ತಪ್ಪಿಸಲು ಪೋಲೀಸರು ಬಿಗಿಬಂದೋಬಸ್ತು ಕ್ರಮ ಕೈಗೊಂಡಿದ್ದಾರೆ.

ಸಭೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಯುವ ಸಂಪೂರ್ಣ ಹೊಣೆಯನ್ನು ರಾಜ್ಯ ಸರಕಾರ ಹೆಗಲ ಮೇಲೆ ಹಾಕಿಕೊಂಡಿದೆ. ಹೀಗಾಗಿ ಹೈಕೋರ್ಟ್‌ ಸಭೆಗೆ ಗ್ರೀನ್‌ ಸಿಗ್ನಲ್‌ ನೀಡಿದೆ. ಹಿಂದು ಜಾಗರಣ ವೇದಿಕೆ, ಆರ್‌ಎಸ್‌ಎಸ್‌, ಶಿವಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಪ್ರತಿಪಕ್ಷಗಳು ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇಂದು (ಶುಕ್ರವಾರ) ಬೆಂಗಳೂರು ಬಂದ್‌ಗೆ ಇಂದು ಕರೆ ನೀಡಿವೆ.

ನಗರದ ಪೋಲೀಸರು, ಮೀಸಲು ಪೋಲೀಸ್‌ ಪಡೆ, ವಿವಿಧ ಜಿಲ್ಲೆಗಳ ಪೋಲೀಸರು ಸೇರಿದಂತೆ ಹತ್ತು ಸಾವಿರಕ್ಕೂ ಅಧಿಕ ಮಂದಿ ಬೆನ್ನಿ ಸಭೆಗೆ ಸರ್ಪಗಾವಲಾಗಿ ನಿಂತಿದ್ದಾರೆ.

ತನ್ನದೇ ಆದ ರಕ್ಷಣಾ ಸಿಬ್ಬಂದಿಯ ನಡುವೆ ಏರ್‌ಪೋರ್ಟ್‌ ರಸ್ತೆಯ ಲೀಲಾ ಪ್ಯಾಲೇಸ್‌ ಹೋಟೆಲ್‌ನಲ್ಲಿ ಬೆನ್ನಿ ಹಿನ್‌ ತಂಗಿದ್ದಾನೆ.

ಶಾಂತಿ ಸುವ್ಯವಸ್ಥೆ ಕಾಯಲು ಪೋಲೀಸರು ಸಜ್ಜಾಗಿದ್ದಾರೆ ಎಂದು ನಗರದ ಪೋಲೀಸ್‌ ಕಮಿಷನರ್‌ ಎಸ್‌.ಮರಿಸ್ವಾಮಿ ತಿಳಿಸಿದ್ದಾರೆ. ಇದೊಂದು ಖಾಸಗಿ ಕಾರ್ಯಕ್ರಮ ಎಂದಿರುವ ಪೋಲೀಸರು, ಹೋಟೆಲ್‌ನಲ್ಲಿ ಬೆನ್ನಿ ಭೇಟಿಗೆ ಪ್ರಯತ್ನಿಸಿದ ಮಾಧ್ಯಮ ಪ್ರತಿನಿಧಿಗಳಿಗೆ ಅನುಮತಿ ನೀಡಲಿಲ್ಲ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+