ಟೆನ್ನಿಸ್: ಸೆರೇನಾ ವಿಲಿಯಂಸ್ ಅನುಭವ-ಅಬ್ಬರಕ್ಕೆ ಸನಿಯಾ ಶರಣು
ಟೆನ್ನಿಸ್: ಸೆರೇನಾ ವಿಲಿಯಂಸ್ ಅನುಭವ-ಅಬ್ಬರಕ್ಕೆ ಸನಿಯಾ ಶರಣು
ಸೋಲಿನ ನಡುವೆಯೂ ದಿಟ್ಟ ಆಟ ಪ್ರದರ್ಶಿಸಿದ ಭಾರತೀಯ ತಾರೆ
ಅಮೆರಿಕಾದ ಅಗ್ರಶ್ರೇಯಾಂಕದ ಆಟಗಾರ್ತಿ ಸೆರೇನಾ ವಿಲಿಯಂಸ್ ವಿರುದ್ಧ ಶುಕ್ರವಾರ ಬೆಳಗ್ಗೆ ನಡೆದ ಹಣಾಹಣಿಯಲ್ಲಿ ಸನಿಯಾ 6-1, 6-4 ಸ್ಕೋರ್‌ನಿಂದ ಸೋಲುಂಡರು. ಇದರೊಂದಿಗೆ ಸೋನಿಯಾ ಅವರ ಆಸ್ಟ್ರೇಲಿಯನ್ ಓಪನ್ ಅಭಿಯಾನ ಕೊನೆಗೊಂಡಿತು.
ಬಲಿಷ್ಠ ಹೊಡೆತಗಳ ಆಟಗಾರ್ತಿ ಸೆರೇನಾ ವಿರುದ್ಧದ ಸನಿಯಾ ಅವರ ಆಟ ಗೂಳಿಯ ವಿರುದ್ಧದ ಚಿಗರೆಯ ಹಣಾಹಣಿಯಂತಿತ್ತು . ಆದರೆ ಸುಲಭವಾಗಿ ಸೋಲೊಪ್ಪದ ಸನಿಯಾ ಎರಡನೇ ಸೆಟ್‌ನಲ್ಲಿ ವಿಶ್ವದ ಏಳನೇ ಕ್ರಮಾಂಕದ ಆಟಗಾರ್ತಿಗೆ ಕೊಂಚ ಪ್ರತಿರೋಧ ತೋರುವ ಮೂಲಕ ತಮ್ಮ ಈವರೆಗಿನ ಸಾಧನೆ ಅನಿರೀಕ್ಷಿತವಲ್ಲ ಎನ್ನುವುದನ್ನು ಸಾಬೀತು ಪಡಿಸಿದರು.
ಈ ಮುನ್ನ ಹಂಗೇರಿಯ ಪೆಟ್ರಾ ಮೆಡುಲ್ಲಾ ಅವರನ್ನು ಮಣಿಸುವ ಮೂಲಕ ಮೂರನೇ ಸುತ್ತು ಪ್ರವೇಶಿಸಿದ್ದ ಸನಿಯಾ, ಈ ಸಾಧನೆಗೈದ ಮೊದಲ ಭಾರತೀಯ ಮಹಿಳೆ ಎನ್ನುವ ಅಗ್ಗಳಿಕೆಗೆ ಪಾತ್ರರಾಗಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications