ಬೆಂಗಳೂರಲ್ಲಿ ಲೈವ್‌ಬ್ಯಾಂಡ್ ಗಾಯಕಿ ಮೇಲೆ ಸಾಮೂಹಿಕ ಅತ್ಯಾಚಾರ
ಬೆಂಗಳೂರಲ್ಲಿ ಲೈವ್‌ಬ್ಯಾಂಡ್ ಗಾಯಕಿ ಮೇಲೆ ಸಾಮೂಹಿಕ ಅತ್ಯಾಚಾರ
ಗಣೇಶನ ಖರೀದಿಗೆಂದು ಬಂದ ಯುವಕರಿಂದ ದುಷ್ಕೃತ್ಯ
ಅತ್ಯಾಚಾರಕ್ಕೆ ಬಲಿಯಾಗಿರುವ ಕೋಲ್ಕತ್ತಾ ಮೂಲದ ಯುವತಿ ನಗರದ ಲೈವ್‌ಬ್ಯಾಂಡ್‌ಗಳಲ್ಲಿ ಗಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಮೂರು ತಿಂಗಳ ಹಿಂದಷ್ಟೆ ಕೆಲಸ ಬಿಟ್ಟು ಬೇರೊಂದು ಕೆಲಸ ಹುಡುಕುತ್ತಿದ್ದ ಈ ಯುವತಿ ಆಟೋರಿಕ್ಷಾ ಹತ್ತಿದ್ದನ್ನು ಈ ಗಣೇಶನ ಭಕ್ತರು ಗಮನಿಸಿದ್ದಾರೆ.
ಮಾರ್ಗಮಧ್ಯೆ ರಿಕ್ಷಾವನ್ನು ಅಡ್ಡಗಟ್ಟಿ, ರಿಕ್ಷಾ ಚಾಲಕನಿಗೆ ಚಾಕು ತೋರಿಸಿ, ಬೆದರಿಸಿ ಕಳುಹಿಸಿದ್ದಾರೆ. ಸ್ವಲ್ಪ ಹಣವನ್ನು ಸಹಾ ನೀಡಿ, ಈ ವಿಚಾರ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಎಚ್ಚರಿಸಿದ್ದಾರೆ. ನಂತರ ಯುವತಿಯನ್ನು ಸ್ಮಶಾನದೊಳಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.
ಯಾರಿಗೂ ಹೇಳುವುದಿಲ್ಲವೆಂದು ಅಲ್ಲಿಂದ ಹೊರಟ ರಿಕ್ಷಾಚಾಲಕ ನೀಡಿದ ಮಾಹಿತಿಯನ್ವಯ ಆರೋಪಿಗಳಾದ ದಿವಾಕರ್, ವಿಜಯಕುಮಾರ್, ಲೋಕೇಶ್, ಕುಮಾರ್‌ನನ್ನು ಪೋಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಕಾರ್ತಿಕ್ ಎಂಬಾತ ಪರಾರಿಯಾಗಿದ್ದು ಪೋಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications