ಹಲೋ ಎಸ್ಸೆಂ ಕೃಷ್ಣ ಮಾತನಾಡುತ್ತಿರುವುದು.. ನಿಮಗೂ ಕರೆ ಬಂತೆ?
ಹಲೋ ಎಸ್ಸೆಂ ಕೃಷ್ಣ ಮಾತನಾಡುತ್ತಿರುವುದು.. ನಿಮಗೂ ಕರೆ ಬಂತೆ?
ಹೈಟೆಕ್ ಕೃಷ್ಣರ ಪ್ರಚಾರದ ಹೊಸ ಅವತಾರ
ಚುನಾವಣೆ ಬಂತೆಂದರೆ ಎಲ್ಲಾ ಪಕ್ಷಗಳು ಪ್ರಚಾರಕ್ಕಾಗಿ ತಮ್ಮಿಂದ ಸಾಧ್ಯವಾದ ತಂತ್ರ-ಮಾಧ್ಯಮಗಳನ್ನು ಬಳಸಿಕೊಳ್ಳುತ್ತವೆ. ಭಿತ್ತಿಪತ್ರದಿಂದ ಇ-ಮೈಲ್ ತನಕ ಬಹುತೇಕ ಮಾಧ್ಯಮಗಳನ್ನು ಪಕ್ಷಗಳು ಬಳಸಿಕೊಂಡಿವೆ. ಅಂದ ಮೇಲೆ ನಮ್ಮ ಹೈಟೆಕ್ ಮುಖ್ಯ ಮಂತ್ರಿಗಳು ಹಿಂದೆ ಬೀಳಲು ಸಾಧ್ಯವೆ?
ಟಿವಿ, ಪತ್ರಿಕೆ, ಎಸ್‌ಎಮ್‌ಎಸ್, ಆನ್-ಲೈನ್ ಮುಂತಾದ ತಂತ್ರಗಳನ್ನು ಬಳಸಿರುವ ಕಾಂಗ್ರೆಸ್‌ನ ಎಸ್ಸೆಂ ಕೃಷ್ಣ ಅವರು ಈಗ ‘ಫೋನ್’ ಮೊರೆ ಹೋಗಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ 7ರಿಂದ ರಾತ್ರಿ 10ವರೆಗೆ ಸುಮಾರು 75 ಸಾವಿರ ಧ್ವನಿ ಸಂದೇಶಗಳನ್ನು ಮತಯಾಚಿಸಿ ಕಳುಹಿಸುತ್ತಾರೆ.
ಬೆಂಗಳೂರಿನಿಂದ ಹಿಡಿದು ಹಳ್ಳಿಹಳ್ಳಿಯಲ್ಲಿರುವ ಫೋನ್ ಮತ್ತು ಮೊಬೈಲ್‌ಗಳಿಗೆ ಧ್ವನಿ ಸಂದೇಶ ಬರುತ್ತದೆ. ಸಂದೇಶಗಳು ನಿಮಗೆ ಕಾಂಗ್ರೆಸ್‌ಗೆ ಬೆಂಬಲ ನೀಡುವಂತೆ ಕೋರುತ್ತದೆ. ಸದ್ಯದಲ್ಲೇ ನಿಮಗೂ ಫೋನ್ ಬರಬಹುದು. ಆದರೆ ಅವರಿಗೆ ಮರು ಪ್ರಶ್ನೆ ಕೇಳಿ ಮೂರ್ಖರಾಗಬೇಡಿ. ಯಾಕೆಂದರೆ ಇದು ಮುದ್ರಿತ ಧ್ವನಿ !
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications