ಪೈಲ್ವಾನರ ತವರು ಮೈಸೂರಲ್ಲಿ ನ.29ರಿಂದ ಜೂಡೊ ಜೂಡೊ
ಪೈಲ್ವಾನರ ತವರು ಮೈಸೂರಲ್ಲಿ ನ.29ರಿಂದ ಜೂಡೊ ಜೂಡೊ
250ಕ್ಕೂ ಹೆಚ್ಚು ಸ್ಪರ್ಧಿಗಳ ಹಣಾಹಣಿ
ಆತ್ಮ ರಕ್ಷಣೆಯ ಉದ್ದೇಶದಿಂದ ರೂಪುಗೊಂಡ ಜಪಾನಿ ಮೂಲದ ಜೂಡೊ ಕಲೆ ಇತ್ತೀಚೆಗೆ ಭಾರತದಲ್ಲಿ ಜನಪ್ರಿಯಗೊಳ್ಳುತ್ತಿದೆ. ಜೂಡೊ ಪಂದ್ಯಾವಳಿಯ ಮೂಲಕ ಮೈಸೂರಿನ ನಾಗರಿಕರು, ವಿಶೇಷವಾಗಿ ಯುವ ಜನಾಂಗಕ್ಕೆ ಜೂಡೊ ಬಗೆಗೆ ಆಸಕ್ತಿ ಬೆಳೆಸಿಕೊಳ್ಳಲು ಒಂದು ಅವಕಾಶ ದೊರೆತಂತಾಗಿದೆ.
ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಜೂಡೊ ಪಂದ್ಯಾವಳಿ ನಡೆಯುತ್ತಿದೆ. ಈ ಪಂದ್ಯಾವಳಿಯಲ್ಲಿ ಸುಮಾರು 250 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ ಎಂದು ಜಿಲ್ಲಾ ಜೂಡೊ ಸಂಸ್ಥೆಯ ಅಧ್ಯಕ್ಷೆ ಪರೊ.ಡಿ.ಜನಾರ್ಧನಮ್ಮ ತಿಳಿಸಿದ್ದಾರೆ.
ಕರ್ನಾಟಕ, ಪಾಂಡಿಚೆರಿ ಹಾಗೂ ಕೇರಳ ರಾಜ್ಯಗಳ ಕ್ರೀಡಾಪಟುಗಳು ಜೂಡೊ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಮಹಾಜನ ಕಾಲೇಜಿನಲ್ಲಿ ನ.29 ಹಾಗೂ 30ರಂದು ನಡೆಯುವ ಜೂಡೊ ಪಂದ್ಯಾವಳಿಗೆ ಎಲ್ಲರಿಗೂ ಸ್ವಾಗತ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications