ಪ್ರಾಣಿ ಸ್ನೇಹ : ಮೈಸೂರಿನ ಮಂಗ- ನಾಯಿ ಭಾಯಿ ಭಾಯಿ
ಪ್ರಾಣಿ ಸ್ನೇಹ : ಮೈಸೂರಿನ ಮಂಗ- ನಾಯಿ ಭಾಯಿ ಭಾಯಿ
ಮಂಗವನ್ನುಳಿದು ಈ ನಾಯಿ ಸುತಾರಾಂ ಇರುತ್ತಿಲ್ಲ
ಕೊನೆಗೆ ನಾಯಿಯನ್ನು ತಿಂಡಿಯ ಆಮಿಷವೊಡ್ಡಿ ಒಬ್ಬ ದೂರ ಓಡಿಸಿಕೊಂಡು ಹೋದ. ಮಂಗವನ್ನು ಪಂಜರಕ್ಕೆ ಹಾಕಿಕೊಂಡು, ಪಾಲಿಕೆ ವಾಹನದಲ್ಲಿ ಅದನ್ನು ಇಟ್ಟುಕೊಂಡು ತಂಡ ಹೊರಟಿತು. ಹಿಂದೆ ನೋಡಿದರೆ, ಅದೇ ನಾಯಿ ಹಿಂಬಾಲಿಸುತ್ತಿದ್ದುದು ಕಂಡಿತು. ಹೆದರಿದ ಪಾಲಿಕೆಯ ತಂಡ ಮಂಗವನ್ನು ಪಂಜರದ ಸಮೇತ ಪಾಲಿಕೆ ಕಟ್ಟಡದ ಪಕ್ಕ ಇಟ್ಟು ದೌಡು.
ಈಗ ಪಂಜರದಲ್ಲಿ ಕೋತಿ ಇದೆ. ಅದರ ಪಕ್ಕದಲ್ಲಿ ನಾಯಿ ಕಾಯುತ್ತಾ ಕೂತಿದೆ. ಮಂಗನಿಗೆ ಜನ ತುಂಡು ಬ್ರೆಡ್ಡು ಎಸೆದರೆ, ಅದನ್ನು ಇನ್ನೊಂದು ತುಂಡು ಮಾಡಿ ಮಂಗ ನಾಯಿಗೆ ಕೊಡುತ್ತದೆ. ಇವೆರಡೂ ತಮ್ಮದೇ ಆದ ಭಾಷೆಯಲ್ಲಿ ಮಾತಾಡುತ್ತಿವೆ, ಮುದ್ದಾಡುತ್ತಿವೆ. ಈ ಒಳ್ಳೆಯ ಸ್ನೇಹಿತರು ಕರ್ನಾಟಕದ ಪ್ರವಾಸಿ ರಾಜಧಾನಿ ಮೈಸೂರಿನ ಸದ್ಯದ ಹೊಸ ಆಕರ್ಷಣೆ !
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications