ವೆಬ್‌ಸೈಟ್‌ ಭಕ್ತ ಮಹಾಶಯರಿಗೆ ಆನ್‌ಲೈನ್‌ ಆಶೀರ್ವಾದ !

ವೆಬ್‌ಸೈಟ್‌ ಭಕ್ತ ಮಹಾಶಯರಿಗೆ ಆನ್‌ಲೈನ್‌ ಆಶೀರ್ವಾದ !
ಕಂಪ್ಯೂಟರ್‌ ಪರದೆಗೆ ಶಿರ ಸಾಷ್ಟಾಂಗ ಮಾಡಿದರೆ ಆಶೀರ್ವಾದ ತಂತಾನೇ ಸಿಗುತ್ತೆ :)

*ದಟ್ಸ್‌ಕನ್ನಡ ಬ್ಯೂರೋ

ಕಾಲ ಬದಲಾಗಿದೆ ಸ್ವಾಮಿ. ದೇವಳಕ್ಕೆ ಹೋಗಿ, ಕ್ಯೂ ನಿಂತು, ಪೂಜೆ ಚೀಟಿ ಕೊಂಡು, ಪೂಜಾರೀನ ಕಂಡು, ಒಡೆಸುವುದರಲ್ಲಿ ಕಾಯ.. ಕಾಲ ಮಂಗಮಾಯ. ಟೈಮ್‌ ಈಸ್‌ ಪ್ರೆಷಿಯಸ್‌ ಅಂತ ... ಸುಟ್ಟುಕೊಂಡ ಬೆಕ್ಕಿನಂತ ಓಡಾಡುವ ಮಂದಿಗೆ ಕುಂತಲ್ಲೇ ಕುಲದೇವತೆಗೆ ಈ- ಮೇಲ್‌ ಅರ್ಚನೆ ಮಾಡುವ ಅವಕಾಶ ಒದಗಿಸಲಾಯಿತು. ಈಗ ಅದೂ ಸಾಲದೆಂಬಂತೆ ಹಿಂದೂ, ಮುಸ್ಲಿಂ, ಕ್ರಿಸ್ತ, ಸಿಖ್ಖ, ಬೌದ್ಧ- ಸಕಲ ಧರ್ಮದವರಿಗೂ ತಮ್ಮ ಮೆಚ್ಚಿನ ದೇವರು ಅಥವಾ ಸ್ವಾಮೀಜಿಯಿಂದ ಆನ್‌ಲೈನ್‌ನಲ್ಲೇ ಆಶೀರ್ವಾದ ಸಿಕ್ಕುತ್ತಿದೆ.

ಇದು ಜೋಕಲ್ಲ. ಬೇಕಾದರೆ www.blessed-bandwidth.net ಎಂಬ ವೆಬ್‌ಸೈಟ್‌ ನೋಡಿ. ಅಲ್ಲಿ ಧರ್ಮವನ್ನು ಆಯ್ದುಕೊಳ್ಳಿ ಎಂಬೊಂದು ಇಂಗ್ಲಿಷ್‌ ಬರಹ ಕಾಣಿಸುತ್ತದೆ. ಆ ಆಯ್ಕೆಯ ಮೇಲೆ ಮೌಸ್‌ ಕ್ಲಿಕ್ಕಿಸಿದರೆ- ಸಿದ್ಧಿವಿನಾಯಕ ದೇವಸ್ಥಾನ, ಮೌಸೋಲಿಯಮ್‌ ಆಫ್‌ ಸೇಂಟ್‌ ಹಾಜಿ ಅಲಿ, ದಶ್‌ಮೇಶ್‌ ದರ್ಬಾರ್‌, ಸೇಂಟ್‌ ಮೈಕೆಲ್ಸ್‌ ಚರ್ಚ್‌, ವೋರ್ಲಿಯ ಬುದ್ಧ ದೇಗುಲ ಮತ್ತು ಶ್ರೀ ಶ್ರೀ ರವಿಶಂಕರ್‌ ಗುರೂಜಿ- ಇವೆಲ್ಲ ಇಂಗ್ಲಿಷ್‌ನಲ್ಲೇ ಕಾಣುತ್ತವೆ. ನಿಮ್ಮ ನಿಮ್ಮ ಭಕ್ತಿಗೆ ತಕ್ಕಂಥವರನ್ನು ಆರಿಸಿಕೊಳ್ಳಿ.

ಆಮೇಲೆ ತೆರಕೊಳ್ಳುವ ಇನ್ನೊಂದು ಪುಟದಲ್ಲಿ ಆಶೀರ್ವಾದ ಪಡೆಯಿರಿ ಎಂಬ ಒಕ್ಕಣೆ ಇರುತ್ತದೆ. ಅದನ್ನು ಕ್ಲಿಕ್ಕಿಸಿ. ಕಂಪ್ಯೂಟರ್‌ ಪರದೆ ಮೇಲೆ ಸಲಹೆಗಳು ಕಾಣುತ್ತವೆ. ಅವುಗಳೆಂದರೆ- 1. ನೇರವಾಗಿ ಕೂತುಕೊಳ್ಳಿ, ಬಾಗಬೇಡಿ. 2. ನಿಧಾನವಾಗಿ ಮುಂದಕ್ಕೆ ಬಾಗಿ. ಧ್ಯಾನಸ್ಥ ಮನಸ್ಸು ನಿಮ್ಮದಾಗಿರಲಿ. 3. ಕಂಪ್ಯೂಟರ್‌ ಪರದೆ ಮೇಲೆ ‘ಎಕ್ಸ್‌ ’ ಎಂಬ ಅಕ್ಷರ ಕಾಣುತ್ತಿದೆಯಲ್ಲ ಅದಕ್ಕೆ ನಿಮ್ಮ ಶಿರವ ಸೋಕಿಸಿ. (ಹಿಂದೂ ಭಕ್ತರು ಗಣೇಶನನ್ನು ಆಯ್ದುಕೊಂಡರೆ, ಆತನ ಪಾದಕ್ಕೆ ಶಿರ ತಾಕಿಸಬೇಕು). ಹಾಗೆ ಮಾಡಿದ ತಕ್ಷಣವೇ ಒಂದು ‘ಪಾಪ್‌ ಅಪ್‌ ವಿಂಡೋ’ ತೆರೆದುಕೊಳ್ಳುತ್ತದೆ. ಅದರಲ್ಲಿ Would you like to certify the blessing? ಎಂಬ ಪ್ರಶ್ನೆ ಏಳುತ್ತದೆ. ಹೌದು ಎಂದು ನೀವು ಬಯಸಿದರೆ, ಕ್ಷಣದಲ್ಲೇ ಉತ್ತರವೂ ಸಿಕ್ಕುತ್ತದೆ- ಇಂಥವರಿಂದ ಆಶೀರ್ವಾದ ಸಿಕ್ಕಿದೆ ! ಬೇಕಾದರೆ ಆಶೀರ್ವಾದ ಸಂದೇಶದ ಪ್ರಿಟ್‌ಔಟನ್ನೂ ಪಡೆಯಬಹುದು.

ಶಿಲ್ಪ ಗುಪ್ತ ಎಂಬ ಹೆಂಗಸು ಈ ದೇವರ ಕಾರ್ಯವನ್ನು ಕಂಪ್ಯೂಟರ್‌ ಮೂಲಕ ನೆರವೇರಿಸುತ್ತಿದ್ದಾರೆ. ಅಲ್ಲಾಹ, ಏಸು, ಗಣೇಶ, ಬುದ್ಧ ದೇವರು, ರವಿಶಂಕರ ಸ್ವಾಮೀಜಿಗಳು- ಸಕಲರು ಅವರಿಗೂ ಮತ್ತು ಭಕ್ತಾದಿಗಳಿಗೂ ಒಳ್ಳೆಯದನ್ನು ಮಾಡಲಿ :)

ಇಂತಹ ಆನ್‌ಲೈನ್‌ ದೇವಸ್ಥಾನ ಮೋಸವೋ, ಮಜವೋ, ಭಕ್ತಿಯ ಹೈಟೆಕ್‌ ರೂಪವೋ? ನೀವೇ ಹೇಳಿ.

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+