ಪೊಲೀಸ್ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲ್ ಹೆಂಗಸರ ಸಾವು
ಪೊಲೀಸ್ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲ್ ಹೆಂಗಸರ ಸಾವು
ಉಡುಪಿಯ ಪೊಲ್ಲಾಟೂ ಕಾಡಿನಲ್ಲಿ ಇನ್ನಷ್ಟು ನಕ್ಸಲೀಯರು ಇರುವ ಶಂಕೆ
ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಟಿ.ಮಡಿಯಾಳ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಸೋಮವಾರ ಬೆಳಗಿನ ಜಾವದಲ್ಲಿ ಈ ಘಟನೆ ಸಂಭವಿಸಿದೆ. ಎನ್‌ಕೌಂಟರ್‌ನಲ್ಲಿ ಒಬ್ಬಾಕೆ ಸ್ಥಳದಲ್ಲೇ ಸತ್ತಳು. ತೀವ್ರವಾಗಿ ಗಾಯಗೊಂಡಿದ್ದ ಇನ್ನೊಬ್ಬ ನಕ್ಸಲೀಯ ಹೆಂಗಸು ಸ್ವಲ್ಪ ಸಮಯದ ನಂತರ ಮೃತಪಟ್ಟಳು ಎಂದರು.
ಸುಮಾರು 5 ಮಂದಿ ನಕ್ಸಲೀಯರ ತಂಡ ಪೊಲೀಸರ ಕಣ್ಣಿಗೆ ಬಿತ್ತು. ಪೊಲೀಸರು ಹಾಗೂ ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆಯಿತು. ಹೀಗಾದಾಗ ಇಬ್ಬರು ಪೊಲೀಸ್ ಪೇದೆಗಳು ಗಾಯಗೊಂಡಿದ್ದಾರೆ. ಒಬ್ಬ ಪೊಲೀಸನ ತಲೆಗೆ ಗುಂಡೇಟು ಬಿದ್ದಿದೆ. ಇನ್ನೊಬ್ಬನ ತೊಡೆಗೆ ಗಾಯವಾಗಿದೆ. ಉಡುಪಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಇನ್ನಷ್ಟು ನಕ್ಸಲೀಯರು ತಳವೂರಿರುವ ಶಂಕೆಯಿದ್ದು, ಪೊಲೀಸರು ತೀವ್ರ ತಲಾಷು ನಡೆಸಿದ್ದಾರೆ. ಎನ್‌ಕೌಂಟರ್ ಕುರಿತು ತನಿಖೆ ಈಗಾಗಲೇ ಪ್ರಾರಂಭವಾಗಿದೆ ಎಂದು ಮಡಿಯಾಳ್ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications