ನಗರಾಭಿವೃದ್ಧಿ ಸಂಬಂಧ ರಾಜ್ಯದೊಂದಿಗೆ ಚೀನಾ ಒಡಂಬಡಿಕೆ
ನಗರಾಭಿವೃದ್ಧಿ ಸಂಬಂಧ ರಾಜ್ಯದೊಂದಿಗೆ ಚೀನಾ ಒಡಂಬಡಿಕೆ
ರಾಜ್ಯದಲ್ಲಿ ಉತ್ತಮ ಶಾಲೆಗಳ ಬಗ್ಗೆ ಚೀನಾ ಆಸಕ್ತಿ
ಜಿಯಾಂಗ್ಸು ಪ್ರಾಂತ್ಯದ ಸ್ಥಾಯೀ ಸಮಿತಿಯ ಉಪಾಧ್ಯಕ್ಷ ಲೀ ಪಿಯೋಯು ಅವರ ನೇತೃತ್ವದ ಸಮಿತಿಯು ಶುಕ್ರವಾರ (ನ. 14) ನಗರಕ್ಕೆ ಭೇಟಿ ನೀಡಿ, ನಗರಾಭಿವೃದ್ಧಿ ಸಚಿವ ಡಿ. ಕೆ. ಶಿವಕುಮಾರ್ ಅವರೊಂದಿಗೆ ನಗರಾಭಿವೃದ್ಧಿ ಕುರಿತು ಚರ್ಚೆ ನಡೆಸಿತು. ನಗರಾಭಿವೃದ್ಧಿ ಕುರಿತಂತೆ ಕರ್ನಾಟಕ ಹಾಗೂ ಚೀನಾ ನಡುವಿನ ಒಪ್ಪಂದಕ್ಕೆ ಮುನ್ನಿನ ಕಾಗದ ಪತ್ರಗಳನ್ನು ಡಿಕೇಶಿ ಹಾಗೂ ಪಿಯೋಯು ಅವರು ಪರಸ್ಪರ ವಿನಿಮಯ ಮಾಡಿಕೊಂಡರು.
ಬೆಂಗಳೂರಿನಲ್ಲಿ ಕೈಗೆತ್ತಿಕೊಂಡಿರುವ ಉದ್ಯಾನ ಮುಂತಾದ ಯೋಜನೆಗಳ ಕುರಿತೂ ಚೀನಾ ಆಸಕ್ತಿ ಹೊಂದಿದೆ. ಲೀ ಪಿಯೋಯು ನೇತೃತ್ವದ ಸಮಿತಿಯು ತಮ್ಮನ್ನು ಚೀನಾ ಪ್ರವಾಸಕ್ಕೆ ಆಹ್ವಾನಿಸಿದೆ ಎಂದು ಸಮಿತಿಯಾಂದಿಗಿನ ಮಾತುಕತೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವಕುಮಾರ್ ತಿಳಿಸಿದರು.
ಚೀನಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸಮಿತಿಯು ರಾಜ್ಯದಲ್ಲಿ ಉತ್ತಮ ಶಾಲೆಗಳ ಬಗ್ಗೆಯೂ ಕುತೂಹಲ ಹೊಂದಿದೆ ಎಂದು ಶಿವಕುಮಾರ್ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications