ನವದೆಹಲಿಯಲ್ಲಿ ನ.27ರಂದು 12000 ಜೋಡಿಗೆ ಕಂಕಣ ಬಲ

ನವದೆಹಲಿಯಲ್ಲಿ ನ.27ರಂದು 12000 ಜೋಡಿಗೆ ಕಂಕಣ ಬಲ
ಸುಮುಹೂರ್ತದಿಂದಾಗಿ ರಾಜಧಾನಿಯಲ್ಲಿ ಮದುವೆ ಸುಗ್ಗಿ

ನವದೆಹಲಿ : ನವಂಬರ್‌ ತಿಂಗಳ 27ನೇ ತಾರೀಖು ದೆಹಲಿಯ ಮಟ್ಟಿಗೆ ವಿಶೇಷದ ದಿನ. ಅಂದು ಇಡೀ ರಾಜಧಾನಿಯನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮದುವೆಯ ಸಂಭ್ರಮ ಆವರಿಸಿಕೊಳ್ಳಲಿದೆ.

ಸುಮಾರು 12 ಸಾವಿರ ಜೋಡಿಗಳು ನ.27ರಂದು ವಿವಾಹಬಂಧನಕ್ಕೊಳಗಾಗಲಿವೆ ಎಂದು ವರದಿಯಾಂದು ತಿಳಿಸಿದೆ. ಇಷ್ಟೊಂದು ಸಂಖ್ಯೆಯ ಮದುವೆಗಳು ಒಂದೇ ದಿನ ನಡೆಯುವಾಗ, ಇಡೀ ನಗರಕ್ಕೆ ನಗರವೇ ಮದುವೆ ಸಂಭ್ರಮದಲ್ಲಿ ಮುಳುಗೇಳುವುದರಲ್ಲಿ ಏನಾಶ್ಚರ್ಯ.

ಅಂದಹಾಗೆ, ರಾಜಧಾನಿ ನಗರಿಗೆ ಮದುವೆಯ ಸನ್ನಿ ಬಡಿದಿದೆಯಾ ? ಹಾಗೇನಿಲ್ಲ . ನವಂಬರ್‌ 27ನೇ ತಾರೀಖು ಮುಹೂರ್ತ ಪ್ರಶಸ್ತವಾಗಿದೆ. ಆ ಮುಹೂರ್ತ ಮದುವೆಗೆ ಹೇಳಿಮಾಡಿಸಿದಂತದ್ದು ಎಂದು ಪುರೋಹಿತರು ಒಮ್ಮತದಿಂದ ಶಿಫಾರಸ್ಸು ಮಾಡುತ್ತಿರುವುದೇ ಈ ಮದುವೆ ಸುಗ್ಗಿಗೆ ಕಾರಣ. ಒಳ್ಳೆಯ ಮುಹೂರ್ತದ ಕಾರಣ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಮದುವೆ ಮಾತುಕತೆಗಳೂ ಜೀವ ಪಡೆದಿರುವುದಾಗಿ ಸುದ್ದಿ .

ಮದುವೆಗಳೇನೋ ಸಾಲು ಸಾಲಾಗಿವೆ. ಆದರೆ ಮದುವೆ ಮಾಡಿಸುವ ಪುರೋಹಿತರಿಗೀಗ ಕೊರತೆ ಎದುರಾಗಿದೆ ಎನ್ನುತ್ತಾರೆ ಪಶ್ಚಿಮ ದೆಹಲಿಯ ಪುರೋಹಿತ ದ್ವಾರಕಾನಾಥ್‌ ಮಿಶ್ರ. ಹಾಗೆಂದು ಮದುವೆಗಳೇನೂ ನಿಲ್ಲುವುದಿಲ್ಲ . ದ್ವಿಪಾತ್ರವೊ, ತ್ರಿಪಾತ್ರಾಭಿನಯವೋ- ಮದುವೆಗಳಂತೂ ಮುಗಿಯುತ್ತವೆ.

ಭಾವೀ ದಂಪತಿಗಳಿಗೆ ದಟ್ಸ್‌ಕನ್ನಡದ ಶುಭಕಾಮನೆಗಳು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+