ಆಸ್ಟ್ರೇಲಿಯ ಕ್ರಿಕೆಟಿಗರ ಗೆಲುವಿನ ಗುಟ್ಟು-ಹೆಂಗಸಿನ ಮಸಾಜ್‌ !

ಆಸ್ಟ್ರೇಲಿಯ ಕ್ರಿಕೆಟಿಗರ ಗೆಲುವಿನ ಗುಟ್ಟು-ಹೆಂಗಸಿನ ಮಸಾಜ್‌ !
ಲೂಸಿ ಫ್ರಾಸ್ಟಿಕ್‌ ಎಂಬ 35ರ ಹರೆಯದ ಹೆಂಗಸಿನ ಮಸಾಜ್‌ ಮಾಂತ್ರಿಕತೆ

ನವದೆಹಲಿ : ಆಸ್ಟ್ರೇಲಿಯಾ ಕ್ರಿಕೆಟಿಗರು ಅಷ್ಟು ಪಸಂದಾಗಿ ಆಡಲು ಒಬ್ಬ ಹೆಂಗಸಿನ ಮಾಂತ್ರಿಕ ಸ್ಪರ್ಶ ಕಾರಣ ಎಂದರೆ ನಂಬುತ್ತೀರಾ? ಭಾರತದ ರಾಜಧಾನಿಯಲ್ಲಿ ಈ ವಿಷಯದ್ದೇ ಮಾತುಕತೆ.

ಲೂಸಿ ಫ್ರಾಸ್ಟಿಕ್‌ ಎಂಬಾಕೆಯೇ ಆ ಜಾದೂ ಹೆಂಗಸು. ಈಕೆ ಜ್ಯೋತಿಷ್ಯ ಹೇಳೋದಿಲ್ಲ, ವ್ಯಾಯಾಮ ಮಾಡಿಸೋದಿಲ್ಲ. ಈಕೆ ಆಸ್ಟ್ರೇಲಿಯಾ ಆಟಗಾರರ ದೇಹವನ್ನು ಹಸನಾಗಿ ಮಸಾಜ್‌ ಮಾಡುತ್ತಾರೆ. ಗಿಲ್‌ಕ್ರಿಸ್ಟ್‌ ಮತ್ತು ಹೇಡನ್‌ ಬ್ಯಾಟನ್ನು ಬೀಸುತ್ತಾ ಕಣಕ್ಕಿಳಿಯುವ ಮುನ್ನ ತಮ್ಮ ಸ್ನಾಯುಗಳನ್ನು ಫ್ರಾಸ್ಟಿಕ್‌ ಮಾಯಾ ಬೆರಳುಗಳಿಗೆ ಕೊಟ್ಟು , ಪೂರ್ಣ ಸಮರ್ಥರಾಗಿರುತ್ತಾರೆ.

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ವಿಶ್ವ ಕಪ್‌ ಗೆದ್ದಾಗ ಕೂಡ ಈಕೆಯ ಮಸಾಜ್‌ ಸಾಕಷ್ಟು ಕೆಲಸ ಮಾಡಿತ್ತು. ಆ ನಂತರ ಪ್ರಾಸ್ಟಿಕ್‌ ತಂಡದ ಅನಿವಾರ್ಯ ಸದಸ್ಯರಲ್ಲಿ ಒಬ್ಬರಾಗಿಹೋದರು. ಒಪ್ಪಂದದ ಪ್ರಕಾರ ಕಳೆದ ಜೂನ್‌ನಲ್ಲೇ ತಂಡವನ್ನು ಬಿಟ್ಟು ಹೋಗಬೇಕಾಗಿದ್ದ ಈಕೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಆದ ಕಾರಣ ತಂಡ ಈಕೆಯನ್ನು ಬಲವಂತವಾಗಿ ಉಳಿಸಿಕೊಂಡಿತು.

ಮಸಾಜ್‌ ತೆರಪಿಯಲ್ಲಿ ಎರಡು ವರ್ಷಗಳ ಡಿಪ್ಲೊಮಾ ಮಾಡಿರುವ ಲೂಸಿ, ವಿಕ್ಟೋರಿಯಾ ಪ್ರಾಂತದ ನಥಾಲಿಯಾದವರು. ಪರ್ತ್‌ನಲ್ಲಿ ಮಸಾಜ್‌ ಕ್ಲಿನಿಕ್‌ ನಡೆಸಿ, ಸಾಕಷ್ಟು ಹೆಸರು ಮಾಡಿದ್ದ ಫ್ರಾಸ್ಟಿಕ್‌ ಅವರನ್ನು ಕ್ರಿಕೆಟ್‌ ತಂಡಕ್ಕೆ ಸೇರಿಸಿಕೊಂಡಿದ್ದು ಒಂದು ಅಪರೂಪದ ತೀರ್ಮಾನವಾಗಿತ್ತು. ಅದಕ್ಕೂ ಮುಂದೆ 2000ನೇ ಇಸವಿಯಲ್ಲಿ ನಡೆದ ಸಿಡ್ನಿ ಒಲಂಪಿಕ್ಸ್‌ ವೇಳೆಯೂ ಆಸ್ಟ್ರೇಲಿಯನ್‌ ಒಲಂಪಿಕ್‌ ಪಟುಗಳು ಈಕೆಯ ಕೈಯ ಮಾಂತ್ರಿಕ ಸ್ಪರ್ಶದಿಂದ ಉತ್ತಮ ಪ್ರದರ್ಶನ ತೋರಿದ್ದರು.

ಟೆಸ್ಟ್‌ ಹಾಗೂ ಏಕದಿನದ ಪಂದ್ಯಗಳಿಗೆ ಆಟಗಾರರಿಗೆ ಬೇರೆ ಬೇರೆ ರೀತಿಯಲ್ಲಿ ಮಸಾಜ್‌ ಮಾಡಬೇಕಾಗುತ್ತದೆ ಎನ್ನುವ ಲೂಸಿ, ದಿನಂಪ್ರತಿ 8 ತಾಸು ಕ್ರಿಕೆಟಿಗರ ಸೇವೆಯಲ್ಲಿ ತೊಡಗುತ್ತಾರೆ. ವಿಶ್ವ ಚಾಂಪಿಯನ್‌ ತಂಡವೊಂದರ ಭಾಗವಾಗಿ ಗುರುತಿಸಿಕೊಂಡಿರುವುದು ಈಕೆಗೆ ಹೆಮ್ಮೆಯ ಸಂಗತಿ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+