ಭಾರತದ ಐಟಿ- ಬಿಟಿ ನಾಗಾಲೋಟಕ್ಕೆ ಸ್ವಿಸ್ ಅಧ್ಯಕ್ಷರ ಶಹಭಾಸ್‌ಗಿರಿ
ಭಾರತದ ಐಟಿ- ಬಿಟಿ ನಾಗಾಲೋಟಕ್ಕೆ ಸ್ವಿಸ್ ಅಧ್ಯಕ್ಷರ ಶಹಭಾಸ್‌ಗಿರಿ
ಬೆಂಗಳೂರಲ್ಲಿ ಸ್ವಿಸ್ ದೇಶದ ಅಧ್ಯಕ್ಷ ಪಾಸ್ಕಲ್ ಕೌಚೆಪಿನ್
ಭಾರತದ ಸಿಲಿಕಾನ್ ರಾಜಧಾನಿ ಬೆಂಗಳೂರನ್ನು ನೋಡುವುದೇ ತಮ್ಮ ಪ್ರವಾಸದ ಮುಖ್ಯ ಉದ್ದೇಶವಾಗಿತ್ತು ಎಂದು ಶುಕ್ರವಾರ (ನ. 07) ಸುದ್ದಿಗಾರರಿಗೆ ಪಾಸ್ಕಲ್ ಹೇಳಿದರು. ಕಳೆದೊಂದು ದಶಕದಲ್ಲಿ ಭಾರತ ಐಟಿ ಮತ್ತು ಬಿಟಿ ಕ್ಷೇತ್ರಗಳಲ್ಲಿ ಅತಿ ವಿಶಿಷ್ಟ ಸಾಧನೆ ಮಾಡಿದೆ. ಅದು ಏಷ್ಯಾದ ಇತರೆ ರಾಷ್ಟ್ರಗಳ ಜೊತೆ ವಿದೇಶೀ ನೇರ ಬಂಡವಾಳ ಪಡೆಯುವಲ್ಲಿ ಪೋಟಿ ಎದುರಿಸುತ್ತಿದೆ. ವಿದೇಶೀ ಬಂಡವಾಳದಾರರನ್ನು ಸೆಳೆಯುವ ಮೂಲಭೂತ ಸೌಲಭ್ಯಗಳು ಇಲ್ಲಿವೆ. ಅವನ್ನು ಸಮರ್ಪಕ ರೀತಿಯಲ್ಲಿ ಬಳಸಬೇಕಷ್ಟೆ ಎಂದು ಕಿವಿಮಾತು ಹೇಳಿದರು.
ಭಾರತದಲ್ಲಿ ವಿದೇಶೀ ನೇರ ಬಂಡವಾಳ ಹೂಡಿರುವ ದೇಶಗಳ ಪೈಕಿ ಸ್ವಿಸ್ 10ನೆಯ ಸ್ಥಾನದಲ್ಲಿದೆ. ಇನ್ನಷ್ಟು ಬಂಡವಾಳ ಹೂಡಲು ನಾವು ಉತ್ಸುಕರಾಗಿದ್ದೇವೆ ಎಂದರು.
ಬೆಂಗಳೂರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಇದೆ. ದೇಶಾದ್ಯಂತ ಏಳು ಐಐಟಿಗಳಿವೆ. ಇವುಗಳಿಂದ ಹೊಮ್ಮುತ್ತಿರುವ ಪ್ರತಿಭೆಗಳು ಎಂಥವರು ಎಂಬುದು ಜಗತ್ತಿಗೇ ಗೊತ್ತಿದೆ. ಭಾರತದ ಸಾಧನೆಯ ದಾಪುಗಾಲಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಭಾರತದಂತೆ ವಿದೇಶೀ ನೇರ ಬಂಡವಾಳದಿಂದ ತಾಂತ್ರಿಕ ಹಾಗೂ ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರಗತಿ ಸಾಧ್ಯ ಎಂಬ ನಿಲುವು ಸ್ವಿಸ್ ದೇಶದ್ದೂ ಆಗಿದೆ ಎಂದು ಪಾಸ್ಕಲ್ ಅಭಿಪ್ರಾಯ ಪಟ್ಟರು.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications