ಪಾಕಿ ಹುಡುಗಿಯ ಪ್ರೇಮ ಪ್ರಸಂಗ

ಪಾಕಿ ಹುಡುಗಿಯ ಪ್ರೇಮ ಪ್ರಸಂಗ
ಪಂಜಾಬಿ ಹುಡುಗನ ಜೊತೆ ನಿಶ್ಚಿತಾರ್ಥವಾದ ನಂತರ ಎರಡು ವರ್ಷ ಮದುವೆ ವೀಸಾ ಸಿಗದೆ ಹೆಣಗಾಡಿದ್ದ ತಾಹಿರಾ ಭಾರತಕ್ಕೆ ಕಾಲಿಟ್ಟ ಘಳಿಗೆ ಹಬ್ಬದ ವಾತಾವರಣವಾಯಿತು. ನಾಳೆ, ನ.7ರ ಶುಕ್ರವಾರ ತಾಹಿರಾ ಮದುವೆ. ಶುಭ ಹಾರೈಸಿ.

ವಾಗಾ : ಲಾಹೋರಿನಿಂದ ಬಂದ ‘ಸದಾ- ಎ- ಸರ್‌ಹದ್‌’ ಬಸ್ಸಿನಿಂದ ಕೆಲ ಕಾಲ ಇಳಿದ ತಾಹಿರಾ ಒಂದೇ ಉಸಿರಿಗೆ ಓಡಿ ಮಕ್ಬೂಲ್‌ ಅಹ್ಮದ್‌ ತೋಳ ತೆಕ್ಕೆಯಲ್ಲಿ ಸೇರಿಕೊಂಡಳು. ಇಬ್ಬರೂ ಮುತ್ತುಗಳ ಹಂಚಿಕೊಂಡರು. ಹಾರ ಬದಲಾಯಿಸಿಕೊಂಡರು. ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ. ಮಂಗಳವಾರ (ಅ. 28) ವಾಗಾದ ಜನನಿಬಿಡ ಪ್ರದೇಶದಲ್ಲೇ ಇಷ್ಟೆಲ್ಲ ನಡೆದುಹೋಯಿತು. ಎರಡು ವರ್ಷಗಳಿಂದ ಅಗಲಿದ ಪ್ರೀತಿಯ ಜೀವಗಳು ಒಂದಾದವು.

‘ಕೊನೆಯದಾಗಿ, ನಾನು ಭಾರತದಲ್ಲಿದ್ದೇನೆ’ ಎಂದು ತ್ರಿವರ್ಣ ಧ್ವಜವನ್ನು ಗಾಳಿಗೊಡ್ಡಿದ ಪಾಕಿಸ್ತಾನದ ಹುಡುಗಿ ತಾಹಿರಾ ‘ನಾನು ಭಾರತವನ್ನು ಪ್ರೀತಿಸುತ್ತೇನೆ’ ಅಂದಾಗ ಕರತಾಡನ. ತಾಹಿರಾಗೆ ವಯಸ್ಸು ಇನ್ನೂ ಇಪ್ಪತ್ತು. ಪಾಕಿಸ್ತಾನದ ಫೈಸಲಾಬಾದ್‌ನಲ್ಲಿ ಬಿಎಸ್ಸಿ ಓದಿದ್ದಾಳೆ. ಚಿಕ್ಕಂದಿನಿಂದಲೂ ಮಾವನ ಮಗ ಮಕ್ಬೂಲ್‌ ಎಂದರೆ ಇವಳಿಗೆ ಬಲು ಪ್ರೀತಿ. ಮಕ್ಬೂಲ್‌ಗೂ ಇವಳೆಂದರೆ ಅಚ್ಚುಮೆಚ್ಚು. ಮಕ್ಬೂಲ್‌ ಪಂಜಾಬಿನ ಹುಡುಗ. ಬೆಳೆದು An Indo Pak Love storyದೊಡ್ಡವರಾದ ಇಬ್ಬರಿಗೂ ಮಾರ್ಚ್‌ 2001ರಲ್ಲಿ ನಿಶ್ಚಿತಾರ್ಥವಾಯಿತು. ಅದೇ ವರ್ಷ ಡಿಸೆಂಬರ್‌ನಲ್ಲಿ ಮದುವೆಯಾಗಬೇಕಿತ್ತು. ಆದರೆ, ಭಾರತದ ಸಂಸತ್‌ ಮೇಲೆ ಉಗ್ರರು ದಾಳಿ ನಡೆಸಿದ್ದು, ಮದುವೆಗೆ ವಿಘ್ನವಾಯಿತು. ಪಾಕಿಸ್ತಾನಿ ಪ್ರಜೆ ತಾಹಿರಾಗೆ ಪಂಜಾಬಿಗೆ ಹೋಗಲು ಮದುವೆ ವೀಸಾ ಸಿಗುವುದು ದುಸ್ತರವಾಯಿತು. ವಲಸೆ ಕಚೇರಿಗೆ ಈಕೆ ಗುಜರಾಯಿಸಿದ ಅರ್ಜಿಗಳೆಲ್ಲ ತಿರಸ್ಕೃತವಾದವು.

ಪಂಜಾಬಿನ ಅಹ್ಮೇದಿಯನ್ಸ್‌ ಸಮುದಾಯಕ್ಕೆ ಸೇರಿದ ಮಕ್ಬೂಲ್‌ ಒಬ್ಬ ಪತ್ರಕರ್ತ. ತನ್ನೆಲ್ಲ ಕಾಂಟ್ಯಾಕ್ಟುಗಳನ್ನು ಬಳಸಿಕೊಂಡು ಪಾಕಿಸ್ತಾನಕ್ಕೆ ಹೋಗಲು ವೀಸಾ ಗಿಟ್ಟಿಸಿಕೊಳ್ಳುವ ಈತನ ಶತಾಯಗತಾಯ ಯತ್ನವೂ ಫಲಿಸಲಿಲ್ಲ.

ಅಹ್ಮೇದಿಯನ್‌ ಪೈಕಿ ಕ್ವೇದಿಯನ್‌ ಪಂಗಡದವನಾದ ಮಕ್ಬೂಲ್‌ ಪಾಕಿಸ್ತಾನಕ್ಕೆ ಫೋನು ಮಾಡಿ ಮಾತಾಡುವ ಸೌಲಭ್ಯದಿಂದಲೂ ವಂಚಿತನಾಗಿದ್ದ. ತನ್ನ ಮನದನ್ನೆಗೆ ಈತ ಸಂದೇಶ ಕಳಿಸುತ್ತಿದ್ದದ್ದು ಕೊಂಕಣ ಸುತ್ತಿ ಮೈಲಾರಕ್ಕೆ ಎಂಬ ರೀತಿ- ಇಂಗ್ಲೆಂಡಿನಲ್ಲಿದ್ದ ಸೋದರಿಗೆ ಫೋನ್‌ ಮಾಡಿ, ಆಕೆಯ ಮೂಲಕ ತಾಹಿರಾಗೆ ಪ್ರೇಮ ಸಂದೇಶ ಕಳಿಸುತ್ತಿದ್ದ. ಮಕ್ಬೂಲ್‌ಗೆ ವಯಸ್ಸು ಮೂವತ್ತು ದಾಟಿತ್ತು. ಹೀಗಾಗಿ ಸಂಬಂಧಿಕರು ಈ ಮದುವೆ ಬೇಡ, ಬೇರೆ ಹುಡುಗೀನಾ ನೋಡು ಅಂತ ದುಂಬಾಲುಬಿದ್ದರು. ಆದರೆ ಮಕ್ಬೂಲ್‌ ಮಾತು ತಪ್ಪಲಿಲ್ಲ. ತಾಹಿರಾ ಕೂಡ ಅಪ್ಪ- ಅಮ್ಮನ ಒತ್ತಾಯಕ್ಕೆ ಮಣಿದು ಮಕ್ಬೂಲ್‌ ಕೈ ಬಿಡಲಿಲ್ಲ. ‘ಸಾಯುವವರೆಗೂ ಬೇಕಾದರೆ ಅವನಿಗಾಗಿ ಕಾಯುತ್ತೇನೆ’ ಅಂತ ಹಟ ಹಿಡಿದಳು.

ಈಗ ಲಾಹೋರಿನಿಂದ ಬಸ್ಸಿನಲ್ಲಿ ಬಂದದ್ದು ತಾಹಿರಾ ಮಾತ್ರ. ಅಪ್ಪ- ಅಮ್ಮನನ್ನೂ ಬಿಟ್ಟು, ಮೆಚ್ಚಿದ ಹುಡುಗನನ್ನು ಮದುವೆಯಾಗಲು ತಾನೊಬ್ಬಳೇ ಬಂದಿದ್ದಾಳೆ. ವೀಸಾ ಗಿಟ್ಟಿಸಿಕೊಳ್ಳಲು ಹೆಣಗಾಡಿದ್ದು ಕೂಡ ಚಿಕ್ಕ ವಯಸ್ಸಿನ ಈ ಹುಡುಗಿ ಒಬ್ಬಳೇ.

ಇಷ್ಟೆಲ್ಲ ಕಥೆ ಬಿಚ್ಚಿಕೊಂಡ ವಾಗಾದಲ್ಲಿ ತಾಹಿರಾ ತನ್ನ ಲಗೇಜನ್ನು ಇಳಿಸಿಕೊಳ್ಳುವಂತಿಲ್ಲ. ಲಾಹೋರಿನ ಬಸ್ಸು ತನ್ನ ಪ್ರಯಾಣಿಕರನ್ನು ಇಳಿಸುವುದು ದೆಹಲಿಯಲ್ಲಿ ಮಾತ್ರ. ಮತ್ತೆ ಬಸ್ಸಿಗೆ ಹತ್ತಿದ ತಾಹಿರಾ ಕಿಟಕಿಯಿಂದ ಹೊರಬಿಟ್ಟ ಕೈಯನ್ನು ಹಿಡಿದು ಮಕ್ಬೂಲ್‌, ‘ಇನ್ನೂ ಕಾಯಿಸುತ್ತೀಯಾ’ ಅಂತ ಕಾತುರದ ಕಣ್ಣಲ್ಲಿ ಕೇಳಿದ. ‘ನಮ್ಮ ಮಿಲನಕ್ಕೆ ಇನ್ನೂ ಎಂಬತ್ತಾರೇ ಕಿಲೋಮೀಟರು ಚಿನ್ನ’ ಅಂದ ತಾಹಿರಾ ಕೆನ್ನೆ ಕೆಂಪಾಗಿತ್ತು. ಬಸ್ಸು ರಾಜಧಾನಿಯತ್ತ ಹೊರಟಿತು.

ಈ ಭಾರತ- ಪಾಕಿಸ್ತಾನಿಯ ಮದುವೆ ನವೆಂಬರ್‌ 7ನೇ ತಾರೀಕು ನಡೆಯಲಿದೆ.

(ಏಜೆನ್ಸೀಸ್‌)

Post your views

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+