ಪುಸ್ತಕದದಲ್ಲಿ ನಗ್ನ ಗಣೇಶ- ಕೆರಳಿದ ಅಮೆರಿಕನ್ ಹಿಂದೂಗಳು
ಪುಸ್ತಕದದಲ್ಲಿ ನಗ್ನ ಗಣೇಶ- ಕೆರಳಿದ ಅಮೆರಿಕನ್ ಹಿಂದೂಗಳು
ಹ್ಯೂಸ್ಟನ್ : ಗಣೇಶ ದೇವರ ನಗ್ನ ಚಿತ್ರವಿರುವ ಹೊಸ ಪುಸ್ತಕವೊಂದು ಇಲ್ಲಿನ ಹಿಂದೂಗಳನ್ನು ಕೆರಳಿಸಿದ್ದು, ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗುತ್ತಿದೆ.ಎಮೋರಿ ವಿಶ್ವವಿದ್ಯಾಲಯದ ಪ್ರೊ। ಪೌಲ್ ಕೋರ್ಟ್‌ರೈಟ್ ಎಂಬುವರು ಸಂಪಾದಿಸಿರುವ ಗಣೇಶನ ಕುರಿತ ಪುಸ್ತಕದ ಮುಖಪುಟದಲ್ಲಿ ಗಣೇಶ ಮೂರ್ತಿಯ ನಗ್ನ ಭಾವಚಿತ್ರ ಪ್ರಕಟವಾಗಿದೆ. ಪುಸ್ತಕದಲ್ಲಿ ತಮ್ಮ ನಂಬಿಕೆಯನ್ನು ಕೆಣಕುವಂಥಾ ಅಂಶಗಳಿವೆ ಎಂದು ಸುಮಾರು 5000 ಹಿಂದೂಗಳು ಪತ್ರವೊಂದಕ್ಕೆ ಸಹಿ ಹಾಕಿದ್ದು, ಪುಸ್ತಕದ ಪ್ರಸಾರವನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಪೌಲ್ ಕೋರ್ಟ್‌ರೈಟ್ ತಾವು ಸಂಪಾದಿಸಿರುವ ಕೃತಿಯ ತಿರುಳನ್ನು ಸಮರ್ಥಿಸಿಕೊಂಡಿದ್ದಾರೆ.(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications