ಕಾಮಾತುರಾಣಾಂ ನ ಲಜ್ಜಾ ನ ಭಯಂ: ಭಾರತದಲ್ಲಿ ಇದು ಜಾಸ್ತಿ !
ಕಾಮಾತುರಾಣಾಂ ನ ಲಜ್ಜಾ ನ ಭಯಂ: ಭಾರತದಲ್ಲಿ ಇದು ಜಾಸ್ತಿ !
ವಿದೇಶೀ ಕಂಪನಿಯಾಂದು ನಡೆಸಿರುವ ಸಮೀಕ್ಷೆ ಪ್ರಕಾರ ಭಾರತ ಕಾಮಾಂಧರ ದೇಶ
ನಗರ ಪ್ರದೇಶಗಳ ಪ್ರತಿಶತ 28ರಷ್ಟು ಭಾರತೀಯರು ಫೋನ್‌ನಲ್ಲಿ ಸೆಕ್ಸಿನ ವ್ಯವಹಾರ ನಡೆಸುತ್ತಾರೆ. ಇಷ್ಟೇ ಪ್ರಮಾಣದ ಮಂದಿ ಮೊಬೈಲಿನಲ್ಲಿ ಕಾಮ ಚುಟುಕು (ಎಸ್‌ಎಂಎಸ್) ಸಂದೇಶ ಕಳಿಸುತ್ತಾರೆ. ಇದೇ ಕೆಲಸವನ್ನು ಮಾಡುವ ಜಗತ್ತಿನ ಸರಾಸರಿ ಮಂದಿಯ ಸಂಖ್ಯೆಗೆ ಭಾರತೀಯ ಕಾಮಾಕಾಂಕ್ಷಿಗಳ ಸಂಖ್ಯೆ ಸಮನಾಗುತ್ತದೆ. ಅಷ್ಟೇ ಅಲ್ಲ , ಜಗತ್ತಿನಲ್ಲಿ ಸರಾಸರಿ ಪ್ರತಿಶತ 11ರಷ್ಟು ಜನ ಕಾಮತೃಷೆ ತಣಿಸಿಕೊಳ್ಳಲು ವೇಶ್ಯೆಯರ ಸಹವಾಸ ಮಾಡಿದ್ದರೆ, ಭಾರತದ ಪ್ರತಿಶತ 17ರಷ್ಟು ಜನ ಹಣ ಕೊಟ್ಟು ಸೆಕ್ಸು ಸುಖ ಪಡೆದಿದ್ದಾರೆ.
ಸಮೀಕ್ಷೆಗೊಳಗಾದವರ ಪೈಕಿ ಭಾರತದ ನಾಲ್ಕು ಪ್ರತಿಶತ ಹುಡುಗಿಯರು ತಮ್ಮ ಬಾಸ್ ಜೊತೆ ಲೈಂಗಿಕ ಸಂಬಂಧ ಹೊಂದಿದ್ದಾರೆ. ಶೇ. 10ರಷ್ಟು ಗೆಳೆಯ/ಗೆಳತಿಯರು ದೈಹಿಕ ಸಂಬಂಧ ಹೊಂದಿದ್ದಾರೆ. ಕಾರ್ಪೊರೇಟ್ ಜಗತ್ತು ಸಂಬಂಧಗಳ ಸ್ವರೂಪಗಳನ್ನು ಬದಲಿಸುತ್ತಿದ್ದು, ಭಾರತದ ಸಾಂಪ್ರದಾಯಿಕ ಮನಸ್ಸುಗಳು ಹಳೆಯ ಕಟ್ಟುಪಾಡುಗಳನ್ನು ತೊರೆದು, ಮುಕ್ತ ಕಾಮಾಟಕ್ಕೆ ಇಳಿಯುತ್ತಿವೆ ಎನ್ನುತ್ತಾರೆ ಮನಃ ಶಾಸ್ತ್ರಜ್ಞರು.
ಸಮೀಕ್ಷೆಗೆ ಒಳಪಡಿಸಿದವರಲ್ಲಿ ನಗರದ ಮಂದಿಯೇ ಹೆಚ್ಚು. ಸಾಮಾಜಿಕ ಬದಲಾವಣೆಯ ಗತಿ ವೇಗವಾಗಿರುವುದು ನಗರದಲ್ಲಿ, ಅದರಲ್ಲೂ ವಿಶೇಷವಾಗಿ ಕಾರ್ಪೊರೇಟ್ ವಲಯದಲ್ಲಾದ್ದರಿಂದ ಹೀಗೆ ಮಾಡಲಾಯಿತು ಎಂದು ವಿದೇಶೀ ಕಂಪನಿ ಹೇಳಿಕೊಂಡಿದೆ. ಸಮೀಕ್ಷೆಗೆ ಒಳಪಟ್ಟ ಭಾರತೀಯರನ್ನು ಕೇಳಿದ ಕಟ್ಟ ಕೊನೆಯ ಪ್ರಶ್ನೆ- ಜಗತ್ತಿನ ಸೆಕ್ಸಿಯೆಸ್ಟ್ ಪುರುಷ ಹಾಗೂ ಸ್ತ್ರೀ ಯಾರು?
ಇದಕ್ಕೆ ಭಾರತೀಯರು ಹಾಕಿರುವ ವೋಟುಗಳಲ್ಲಿ ಹೆಚ್ಚು ಸಂದಿರುವುದು ಡೇವಿಡ್ ಬೆಕ್ಹಾಮ್‌ಗೆ.ನಂತರದ ಸ್ಥಾನ ಪಿಯರ್ಸ್ ಬ್ರೋಸ್ನಾನ್‌ಗೆ. ಸೆಕ್ಸಿಯೆಸ್ಟ್ ಮಹಿಳೆಯಾಗಿ ಜೆನಿಫರ್ ಲೋಪೆಸ್‌ಗೆ ಹೆಚ್ಚು ಮತಗಳು ಸಂದಿವೆ. ಜೆಟಾ ಜೋನ್ಸ್ ಹಾಗೂ ಬ್ರಿಟ್ನಿ ಸ್ಪಿಯರ್ಸ್‌ಗೆ ನಂತರದ ಸ್ಥಾನ.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications