ಮತ್ತೆ ಬಂದ ನೋವು : ಗಂಗೂಲಿ ತೊಡೆಗೆ ಇನ್ನೊಂದು ಶಸ್ತ್ರಚಿಕಿತ್ಸೆ
ಮತ್ತೆ ಬಂದ ನೋವು : ಗಂಗೂಲಿ ತೊಡೆಗೆ ಇನ್ನೊಂದು ಶಸ್ತ್ರಚಿಕಿತ್ಸೆ
‘ತ್ರಿಕೋನ ಸರಣಿಯಲ್ಲಿ ಗಂಗೂಲಿ ಆಡೋದು ಗ್ಯಾರಂಟಿ’
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಆಡದಂತೆ ಮಾಡಿದ್ದ ನೋವು ಈಗ ಶಮನವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಗಂಗೂಲಿ ಚುರುಕಾಗಿ ಓಡಾಡಬಲ್ಲರು. ಸದ್ಯಕ್ಕೆ ಅವರು ಹಾಸಿಗೆ ಮೇಲೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಒಂದು ದಿನದ ಪಂದ್ಯಗಳ ತ್ರಿಕೋನ ಸರಣಿಯಲ್ಲಿ ಅವರು ಆಡುವುದು ಗ್ಯಾರಂಟಿ ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಡಾ. ಎಂ.ನಂದಿ ಸುದ್ದಿಗಾರರಿಗೆ ಹೇಳಿದರು.
ಅ. 14ರಂದು ಇದೇ ರೀತಿಯ ಶಸ್ತ್ರಚಿಕಿತ್ಸೆಗೆ ಗಂಗೂಲಿ ಒಳಗಾಗಿದ್ದರು. ಶುಕ್ರವಾರ (ಅ. 17) ಸಾಯಂಕಾಲ ನೋವು ಮತ್ತೆ ಕಾಣಿಸಿಕೊಂಡಿತು. ಶನಿವಾರ ಬೆಳಗ್ಗೆ ಗಂಗೂಲಿ ಆಸ್ಪತ್ರೆಗೆ ಖಾಸಗಿ ಆಸ್ಪತ್ಪೆಗೆ ಸೇರಿದರು. ತಕ್ಷಣವೇ ಡಾ. ಎಂ. ನಂದಿ ಹಾಗೂ ತಂಡ ಸಣ್ಣ ಶಸ್ತ್ರಚಿಕಿತ್ಸೆ ನಡೆಸಿತು.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications