ವಿಪ್ರೋ ಲಿ. ಲೆಕ್ಕಪತ್ರ ಪ್ರಕಟ: 214.8 ಕೋಟಿ ರೂ.ನಿವ್ವಳಲಾಭ

ವಿಪ್ರೋ ಲಿ. ಲೆಕ್ಕಪತ್ರ ಪ್ರಕಟ: 214.8 ಕೋಟಿ ರೂ.ನಿವ್ವಳಲಾಭ
ವಾಣಿಜ್ಯ ಬೆಳವಣಿಗೆಗಳು ಆಶಾದಾಯಕ- ಪ್ರೇಂಜಿ

ಬೆಂಗಳೂರು : ಸಾಫ್ಟ್‌ವೇರ್‌ ಸೇವೆಗಳ ರಫ್ತಿನಲ್ಲಿ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿರುವ ಬೆಂಗಳೂರು ನೆಲೆಯ ವಿಪ್ರೋ ಲಿಮಿಟೆಡ್‌ 2003ರ ಸೆಪ್ಟಂಬರ್‌ 30ಕ್ಕೆ ಕೊನೆಗೊಂಡ ತ್ರೆೃಮಾಸಿಕದ ಲೆಕ್ಕಪತ್ರಗಳನ್ನು ಪ್ರಕಟಿಸಿದ್ದು , ಈ ಅವಧಿಯಲ್ಲಿ 214.8 ಕೋಟಿ ರುಪಾಯಿಗಳ ನಿವ್ವಳ ಲಾಭ ಗಳಿಸಿದೆ.

ಅಕ್ಟೋಬರ್‌ 17ರ ಶುಕ್ರವಾರ ವಿಪ್ರೋದ ಲೆಕ್ಕಪತ್ರಗಳನ್ನು ಪ್ರಕಟಿಸಲಾಯಿತು. ವಿಪ್ರೋ ಸಂಸ್ಥೆಯ ತ್ರೆೃಮಾಸಿಕ ಲಾಭದಲ್ಲಿ ನಿರೀಕ್ಷೆಯಂತೆ ಶೇ.4ರ ಏರಿಕೆಯಾಗಿದೆ.

2002ನೇ ಇಸವಿಯ ಸೆ.30ಕ್ಕೆ ಕೊನೆಗೊಂಡ ತ್ರೆೃಮಾಸಿಕದಲ್ಲಿ 209 ಕೋಟಿ ರುಪಾಯಿಗಳಿದ್ದ ವಿಪ್ರೋ ಸಂಸ್ಥೆಯ ನಿವ್ವಳ ಲಾಭ, ಈ ಬಾರಿ 214.8 ಕೋಟಿ ರುಪಾಯಿಗೆ ಮುಟ್ಟಿದೆ. ಇದೇ ಅವಧಿಯಲ್ಲಿ , ಒಟ್ಟು ಆದಾಯ 1,004.9 ಕೋಟಿ ರುಪಾಯಿಗಳಿಂದ 1,228.5 ಕೋಟಿ ರುಪಾಯಿಗೆ ನೆಗೆದಿದೆ.

ವಾಣಿಜ್ಯ ಬೆಳವಣಿಗೆಗಳು ಆಶಾದಾಯಕವಾಗಿ ಮುಂದುವರಿದಿವೆ. ಪ್ರಗತಿಯ ದರಗಳೂ ಆರೋಗ್ಯದಾಯಕವಾಗಿವೆ ಎಂದು ಲೆಕ್ಕಪತ್ರ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ಅಭಿಪ್ರಾಯಪಟ್ಟರು. ವಿಪ್ರೋ ಉಪಾಧ್ಯಕ್ಷ ವಿವೇಕ್‌ ಪೌಲ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

(ಏಜೆನ್ಸೀಸ್‌)

ಮುಖಪುಟ / ಐಟಿ - ಬಿಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+