ಬೆಂಗಳೂರು ವಿ.ವಿ. ಇಬ್ಭಾಗ, ತುಮಕೂರಿನಲ್ಲಿ ನೂತನ ವಿ.ವಿ.
ಬೆಂಗಳೂರು ವಿ.ವಿ. ಇಬ್ಭಾಗ, ತುಮಕೂರಿನಲ್ಲಿ ನೂತನ ವಿ.ವಿ.
ತುಮಕೂರು- ಚಿತ್ರದುರ್ಗದ ವಿದ್ಯಾರ್ಥಿಗಳಿಗೆ ಹೊಸ ವಿಶ್ವವಿದ್ಯಾಲಯದಿಂದ ಹೆಚ್ಚು ಅನುಕೂಲ.
ಬೆಂಗಳೂರು ವಿವಿಗೆ ಬರುತ್ತಿರುವ ವಿದ್ಯಾರ್ಥಿಗಳ ನಿರ್ವಹಣೆ ಕಷ್ಟವಾಗುತ್ತಿದೆ. ಸುಮಾರು 450ಕ್ಕೂ ಹೆಚ್ಚು ವಿವಿ ಅನುದಾನಿತ ಕಾಲೇಜುಗಳಿವೆ. ಆದ್ದರಿಂದ ತುಮಕೂರಿನಲ್ಲಿ ಇನ್ನೊಂದು ಹೊಸ ವಿಶ್ವ ವಿದ್ಯಾಲಯವನ್ನು ತೆರೆಯಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ತುಮಕೂರು ವಿವಿ ಪ್ರಸ್ತಾವನೆಗೆ ಮುಖ್ಯಮಂತ್ರಿಗಳ ಅಂಗೀಕಾರ ಈಗಾಗಲೇ ದೊರೆತಿದೆ. ಯೋಜನೆಯನ್ನು ಕಾರ್ಯಗತಗೊಳಿಸಲು ವಿಶೇಷ ಅಧಿಕಾರಿಯಾಬ್ಬರನ್ನು ಸದ್ಯದಲ್ಲೇ ನೇಮಿಸಲಾಗುವುದು. ಹೊಸ ವಿವಿಗೋಸ್ಕರ ತುಮಕೂರು ಡೈರಿ ಆವರಣದಲ್ಲಿ 80 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದ ಸಚಿವರು, ಸರಕಾರದ ಈ ಪ್ರಕ್ರಿಯೆಯಿಂದ ತುಮಕೂರು - ಚಿತ್ರದುರ್ಗ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications