ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ರಥೋತ್ಸವಕ್ಕೆ ನಿರೀಕ್ಷೆಗೆ ಮೀರಿ ಭಕ್ತರು, ವಸತಿಗೆ ಪರದಾಟ

By Staff
|
Google Oneindia Kannada News

ತಿರುಪತಿ ರಥೋತ್ಸವಕ್ಕೆ ನಿರೀಕ್ಷೆಗೆ ಮೀರಿ ಭಕ್ತರು, ವಸತಿಗೆ ಪರದಾಟ
ದೇವರ ಉಚಿತ ದರ್ಶನಕ್ಕೆ ಒಂದೂವರೆ ದಿನದ ಕ್ಯೂ

ಹೈದರಾಬಾದ್‌: ತಿರುಪತಿಯಲ್ಲಿ ನಡೆಯುತ್ತಿರುವ ಬ್ರಹ್ಮ ರಥೋತ್ಸವಕ್ಕೆ ನಿರೀಕ್ಷೆಗಿಂತ ಹೆಚ್ಚು ಜನರು ಆಗಮಿಸುತ್ತಿದ್ದು ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ದೇವಸ್ಥಾನದ ಆಡಳಿತ ಮಂಡಳಿ ಪರದಾಡುತ್ತಿದೆ.

ಸಾರ್ವಜನಿಕ ವಸತಿ ಕೇಂದ್ರಗಳು, ವಸತಿ ಗೃಹಗಳು, ಗೆಸ್ಟ್‌ ಹೌಸ್‌, ಲಾಡ್ಜ್‌ಗಳು, ಭಕ್ತರಿಂದ ತುಂಬಿ ಹೋಗಿದೆ. ತಿರುಪತಿ ತಿರುಮಲದಲ್ಲಿ ಪ್ರತಿ ದಿನ 40 ಸಾವಿರ ಭಕ್ತರಿಗೆ ವಸತಿ ವ್ಯವಸ್ಥೆ ನೀಡುವ ಅವಕಾಶವಿದೆ. ಆದರೆ ಈಗ ಇನ್ನಷ್ಟು ಭಕ್ತರ ಪ್ರವಾಹ ಹರಿದುಬರುತ್ತಿದ್ದು ಸುಮಾರು 60 ಸಾವಿರ ಭಕ್ತರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡುವುದು ಕಷ್ಟವಾಗಿದೆ.

ಇದಲ್ಲದೆ ಅಕ್ಟೋಬರ್‌ 1ರಿಂದ ಗರುಡ ಸೇವೆ ಹಾಗೂ ಅ. 4ರಂದು ನಡೆಯುವ ಬ್ರಹ್ಮರಥೋತ್ಸವಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈಗ ತಿರುಪತಿಯಲ್ಲಿ ವಸತಿ ವ್ಯವಸ್ಥೆಯ ಕೊರತೆಯಿಂದಾಗಿ ಭಕ್ತರು, ಕಲ್ಯಾಣ ಮಂಟಪ, ಫುಟ್‌ಪಾತ್‌ ಹಾಗೂ ಅಂಗಡಿ ಬದಿಯಲ್ಲಿ ಮಲಗುವ ದೃಶ್ಯ ಸಾಮಾನ್ಯವಾಗಿದೆ.

ಸುದರ್ಶನ ಟಿಕೇಟ್‌ ಪಡೆದ ಭಕ್ತರು ದೇವರ ದರ್ಶನಕ್ಕೆ 20ರಿಂದ 24 ಗಂಟೆಗಳ ಕಾಲ ಕಾಯಬೇಕಾಗಿದೆ. ಉಚಿತ ದರ್ಶನ ಪಡೆಯುವ ಭಕ್ತರು ಒಂದೂವರೆ ದಿನ ಕಾಯುವುದು ಅನಿವಾರ್ಯವೆನಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X