ಡಿ.1ರಿಂದ ಬೆಂಗಳೂರಿನಿಂದ ಅಮೆರಿಕಕ್ಕೆ ವಾರಕ್ಕೆ 7 ವಿಮಾನ ಯಾನ
ಡಿ.1ರಿಂದ ಬೆಂಗಳೂರಿನಿಂದ ಅಮೆರಿಕಕ್ಕೆ ವಾರಕ್ಕೆ 7 ವಿಮಾನ ಯಾನ
ಇದು ಏರ್ ಇಂಡಿಯಾ ಮತ್ತು ಲುಫ್ತಾನ್ಸ ನಡುವಿನ ಒಡಂಬಡಿಕೆಯ ಫಲ
ಕೇಂದ್ರ ವಿಮಾನ ಯಾನ ಸಚಿವ ರಾಜೀವ್ ಪ್ರತಾಪ್ ರೂಡಿ ಸೋಮವಾರ (ಆ.25) ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಈ ವಾರ ಏರ್ ಇಂಡಿಯಾ ಹಾಗೂ ಲುಫ್ತಾನ್ಸ ನಡುವೆ ಅಧಿಕೃತವಾಗಿ ಒಡಂಬಡಿಕೆಯಾಗಲಿದ್ದು, ಫ್ರಾಂಕ್‌ಫರ್ಟ್ ಮಾರ್ಗದ ಮೂಲಕ ಅಮೆರಿಕಕ್ಕೆ ಬೆಂಗಳೂರು ಹಾಗೂ ಹೈದರಾಬಾದ್‌ನಿಂದ ನಾಲ್ಕು ಹೆಚ್ಚು ವಿಮಾನಗಳು ಪ್ರತಿ ವಾರ ಹಾರಲಿವೆ. ಕೊಚ್ಚಿಯಿಂದ ಮೂರು ಹೆಚ್ಚು ವಿಮಾನಗಳು ಸಂಚರಿಸಲಿವೆ. ಲುಫ್ತಾನ್ಸ ಬೆಂಗಳೂರು ಹಾಗೂ ಹೈದರಾಬಾದ್‌ನಿಂದ ಮೂರು ಮತ್ತು ಕೊಚ್ಚಿಯಿಂದ ನಾಲ್ಕು ವಿಮಾನಗಳನ್ನ ಹಾರಿಬಿಡಲಿದೆ ಎಂದು ರಾಜೀವ್ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications