ಸಹಸ್ರಮಾನದ ಮೊದಲ ಕುಂಭಮೇಳದಲ್ಲಿ ಶಾಹಿಸ್ನಾನದ ಸಂಭ್ರಮ

ಸಹಸ್ರಮಾನದ ಮೊದಲ ಕುಂಭಮೇಳದಲ್ಲಿ ಶಾಹಿಸ್ನಾನದ ಸಂಭ್ರಮ
ಗೋದಾವರಿ ಬಯಲಿನಲ್ಲಿ ಸಾಧುಸಂತರ ಭಕ್ತಿಯ ಆವೇಶ

ತ್ರಯಂಬಕೇಶ್ವರ : ಆಗಸ್ಟ್‌ 12ರ ಮಂಗಳವಾರ ಬಿಗಿ ಭದ್ರತೆಯ ನಡುವೆ ನೂರಾರು ಸಾಧು ಸಂತರು ಪವಿತ್ರ ಶಾಹಿ ಸ್ನಾನ ಮಾಡುವ ಮೂಲಕ ಕುಂಭಮೇಳ ರಂಗೇರಿತು.

ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ನೂರಾರು ಸಾಧುಸಂತರು ಕುಂಭಮೇಳದ ಪ್ರಾರಂಭ ವಿಧಿಯಾದ ಶಾಹಿ ಸ್ನಾನದಲ್ಲಿ ಮಂಗಳವಾರ ಬೆಳಗ್ಗೆ ಭಾಗವಹಿಸಿದರು. ನಾಗಾ ಸಾಧುಗಳು ಸೇರಿದಂತೆ 10 ಅಖಾಡಗಳಿಗೆ ಸೇರಿದ ಸಾಧುಗಳು ಪವಿತ್ರ ಗೋದಾವರಿ ನದಿಯ ಕುಶವರ್ತ ತೀರ್ಥದಲ್ಲಿ ಸ್ನಾನ ಮಾಡಿದರು.

ದೇಶದ ವಿವಿಧ ಭಾಗಗಳಿಂದ ಬಂದಿರುವ 3 ಲಕ್ಷಕ್ಕೂ ಹೆಚ್ಚು ಭಕ್ತರು ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಕುಂಭಮೇಳದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಭದ್ರತಾ ಹೊಣೆ ಹೊತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಕುಂಭಮೇಳದಲ್ಲಿ ಭಕ್ತರು ಉತ್ಸಾಹದಿಂದ ಭಾಗವಹಿಸುತ್ತಿದ್ದು - ಹರ ಹರ ಮಹದೇವ ಹಾಗೂ ಬಂ ಬಂ ಭೋಲೆ ಎನ್ನುವ ಘೋಷಣೆಗಳು ಮಾರ್ದನಿಸುತ್ತಿವೆ. 12 ವರ್ಷಗಳ ನಂತರ ನಡೆಯುತ್ತಿರುವ ಈ ಕುಂಭಮೇಳ ಹೊಸ ಸಹಸ್ರಮಾನದ ಮೊದಲ ಕುಂಭಮೇಳ ಎನ್ನುವ ಅಗ್ಗಳಿಕೆಗೆ ಪಾತ್ರವಾಗಿದೆ.

(ಪಿಟಿಐ)

ವಾರ್ತಾ ಸಂಚಯ
ನಾಸಿಕ್‌ನಲ್ಲಿ ಶತಮಾನದ ಮೊದಲ ಕುಂಭಮೇಳಕ್ಕೆ ಚಾಲನೆ

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+