ಲಾಲೂ ಪ್ರಸಾದ್ ಯಾದವ್ ಕಂಡ ಪಾಕಿಸ್ತಾನದ ಸದ್ದಾಂ ಹುಸೇನ್!
ಲಾಲೂ ಪ್ರಸಾದ್ ಯಾದವ್ ಕಂಡ ಪಾಕಿಸ್ತಾನದ ಸದ್ದಾಂ ಹುಸೇನ್!
ಪಾಕಿಸ್ತಾನದಲ್ಲಿ ಲಾಲೂ ಭಾರೀ ಫೇಮಸ್ಸು
ಭಾರತದ ಅರುವತ್ತು ರಾಜಕಾರಣಿಗಳು, ಪತ್ರಕರ್ತರು ಮತ್ತು ಬುದ್ಧಿಜೀವಿಗಳ ಪಡೆಯ ಪಾಕಿಸ್ತಾನದ ಪ್ರವಾಸದಲ್ಲಿ ಲಾಲೂ ಪ್ರಮುಖ ಸೆಳಕು. ಭಾನುವಾರ (ಆ. 10) ಹೆಸರಾಂತ ಲಾಲ್ ಹವೇಲಿಗೆ ಲಾಲೂ ಬಂದ ವಿಷಯ ಕೇಳಿದ ಶೇಕ್ ರಷೀದ್ ಅಹ್ಮದ್, ಕಸರತ್ತನ್ನು ಮೊಟಕುಗೊಳಿಸಿ ಜಿಮ್‌ನಿಂದ ನೇರ ಎದ್ದು ಬಂದರು. ಲಾಲೂ ಜೊತೆ ಪಟ್ಟಾಂಗ ಶುರುವಾಯಿತು.
ಖುದ್ದು ಅಹ್ಮದ್ ತಮ್ಮ ಪೋಸ್ಟರುಗಳನ್ನು ಲಾಲೂಗೆ ತೋರಿದರು. ಒಂದನ್ನು ನೋಡನೋಡುತ್ತಲೇ ನಿಮ್ಮ ಪರ್ಸನಾಲಿಟಿ, ಮೀಸೆ, ನೋಟ ಎಲ್ಲ ಥೇಟ್ ಸದ್ದಾಂ ಹುಸೇನ್ ಥರವೇ ಇದೆ. ನೀವು ಪಾಕಿಸ್ತಾನದ ಸದ್ದಾಂ ಹುಸೇನ್ ಅಂತ ಬಿಹಾರಿ ಧಾಟಿಯಲ್ಲೇ ಹೇಳಿದ ಲಾಲೂ ಜೋರಾಗಿ ನಕ್ಕರು. ಕ್ಷಣ ಪೆಚ್ಚಾದ ಅಹ್ಮದ್, ನಿಮ್ಮ ಮಾತಿನಿಂದ ನಾನು ಕೊಲೆಯಾಗ್ತೀನಿ ಅಷ್ಟೆ ಅಂತ ಪ್ರತಿಕ್ರಿಯಿಸಿದರು.
‘ಲಾಲೂಜೀ ಹಮೆ ಆಪ್ ಬಹೂತ್ ಅಚ್ಛೆ ಲಗ್‌ತೇ ಹೈಂ’
ಇಸ್ಲಾಮಾಬಾದ್‌ನ ಮಾರುಕಟ್ಟೆಯಲ್ಲಿ ಭಾನುವಾರ ಪುರುಸೊತ್ತು ಮಾಡಿಕೊಂಡು ಲಾಲೂ ಶಾಪಿಂಗ್‌ಗೆ ಹೋದಾಗ ಅಲ್ಲೂ ಅಭಿಮಾನಿಗಳೋ ಅಭಿಮಾನಿಗಳು. ದೊಡ್ಡ ಆಲೂಗಡ್ಡೆಯನ್ನು ಕೈಗೆತ್ತಿಕೊಂಡು ಲಾಲೂ ನಿಂತಾಗ, ಕೆಮೆರಾ ತಂದು ಕ್ಲಿಕ್ಕಿಸಿದವರಿಗೆ ಲೆಕ್ಕವಿಲ್ಲ. ಕೆಲವರು ‘ಲಾಲೂಜೀ ಕೆ ಹಾತ್ ಮೇ ಆಲೂ’ ಅಂತ ಪನ್ ಎಸೆದು ವ್ಹಾ ವ್ಹಾ ಗಿಟ್ಟಿಸಿಕೊಂಡರು. ಕೊಂಡದ್ದಕ್ಕಿಂತ ಲಾಲೂಗೆ ಬಂದ ಉಡುಗೊರೆಗಳೇನೂ ಕಮ್ಮಿಯಿರಲಿಲ್ಲ.
ಭಾನುವಾರ ಬಿಹಾರಿ ಬಾಬು ಭರಾಟೆ ಜೋರಾಗಿದ್ದರಿಂದಲೇ ಪಾಕಿಸ್ತಾನದ ಪ್ರಮುಖ ಪತ್ರಿಕೆಗಳಲ್ಲಿನ ಸೋಮವಾರದ ಸಂಚಿಕೆಯಲ್ಲಿ ಲಾಲೂ ವಿಷಯಗಳೇ ಹೆಡ್‌ಲೈನ್ಸ್ !
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications