ಕೊಡಗಿನಲ್ಲಿ ಮುಂಗಾರು ಚುರುಕು; ಹಾರಂಗಿಗೆ ಹೆಚ್ಚಿದ ಒಳಹರಿವು
ಕೊಡಗಿನಲ್ಲಿ ಮುಂಗಾರು ಚುರುಕು; ಹಾರಂಗಿಗೆ ಹೆಚ್ಚಿದ ಒಳಹರಿವು
ಶರಾವತಿ ಜಲಾನಯನ ಪ್ರದೇಶದಲ್ಲೂ ವ್ಯಾಪಕ ಮಳೆ
ಹಾರಂಗಿ ಜಲಾನಯನ ಪ್ರದೇಶದಲ್ಲಿ ಬುಧವಾರ (ಆ.6) 17 ಮಿಮೀ ಮಳೆ ಸುರಿದಿದೆ. ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಹರಿವು ಹೆಚ್ಚುತ್ತಿದ್ದು , ಜಲಾಶಯದ ನೀರಿನ ಮಟ್ಟ 2856.58 ಅಡಿಗಳಿಗೆ ಮುಟ್ಟಿದೆ. ನೀರಿನ ಒಳ ಹರಿವು ಇದೇ ರೀತಿ ಮುಂದುವರಿದಲ್ಲಿ ಹಾರಂಗಿ ಜಲಾಶಯ ಶೀಘ್ರದಲ್ಲೇ ಭರ್ತಿಯಾಗುವ ಸಾಧ್ಯತೆಯಿದೆ.
ಮಡಿಕೇರಿ ಹಾಗೂ ವಿರಾಜಪೇಟೆಯಲ್ಲೂ ಉತ್ತಮ ಮಳೆ ಸುರಿಯುತ್ತಿದೆ.
ಲಿಂಗನಮಕ್ಕಿಗೆ ನೀರು : ಶರಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿದ್ದು , ಲಿಂಗನಮಕ್ಕಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಿದೆ. ತೀರ್ಥಹಳ್ಳಿಯಲ್ಲಿ 17.2, ಶಿವಮೊಗ್ಗದಧಿಲ್ಲಿ 4.8 ಹಾಗೂ ಭದ್ರಾವತಿಯಲ್ಲಿ 2.2 ಮಿಮೀ ಮಳೆಯಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications