ಪ್ರಗತಿಗೆ ಪ್ರೋತ್ಸಾಹ! ವಿಶೇಷ ಆರ್ಥಿಕ ವಲಯದಲ್ಲಿ ಹಾಸನ
ಪ್ರಗತಿಗೆ ಪ್ರೋತ್ಸಾಹ! ವಿಶೇಷ ಆರ್ಥಿಕ ವಲಯದಲ್ಲಿ ಹಾಸನ
ಸರಕಾರದ ಮುಂದೆ ವಿಶೇಷ ವಲಯ ಅಭಿವೃದ್ಧಿ ಮಸೂದೆ
ಆ. 04ರ ಸೋಮವಾರ ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆಯಾಂದಕ್ಕೆ ಉತ್ತರಿಸುತ್ತಾ ದೇಶಪಾಂಡೆ ಈ ವಿಷಯ ತಿಳಿಸಿದ್ದು, ಈ ಕುರಿತು ಕೇಂದ್ರ ವಾಣಿಜ್ಯ ಸಚಿವಾಲಯದ ಒಪ್ಪಿಗೆಯ ಮುದ್ರೆ ದೊರೆತಿದೆ ಎಂದರು. ಈ ಬಾರಿಯ ಸಂಸತ್ ಅಧಿವೇಶನದಲ್ಲಿ ವಿಶೇಷ ವಲಯ ಅಭಿವೃದ್ಧಿ ಮಸೂದೆಯನ್ನು ಮಂಡಿಸಲಾಗುವುದು. ಕೇಂದ್ರ ಸರಕಾರವು ಈಗಾಗಲೇ ಈ ಮಸೂದೆಯ ಕರಡು ಪ್ರತಿಯನ್ನು ಎಲ್ಲ ರಾಜ್ಯಗಳಿಗೂ ಕಳುಹಿಸಿದೆ. ರಾಜ್ಯ ಸಚಿವ ಸಂಪುಟದ ಮುಂದೆ ಈ ಕರಡು ಪ್ರತಿ ಬಂದಿದೆ ಎಂದು ದೇಶಪಾಂಡೆ ತಿಳಿಸಿದರು.
ಹಾಸನ ಜಿಲ್ಲೆಯನ್ನು ವಿಶೇಷ ಆರ್ಥಿಕ ವಲಯ( ಸೆಝ್)ವನ್ನಾಗಿ ಪರಿಗಣಿಸುವುದರಿಂದಾಗಿ ಕಂದಾಯ, ಕೈಗಾರಿಕೆ ಹಾಗೂ ಉದ್ಯೋಗ ಕ್ಷೇತ್ರಕ್ಕೆ ಹೊಸ ಉತ್ತೇಜನ ದೊರೆತಂತಾಗುತ್ತದೆ. ಸೆಝ್‌ನ ಅಡಿಯಲ್ಲಿ ಬರುವ ಕೈಗಾರಿಕೆಗಳು ತಾವು ಉತ್ಪಾದಿಸುವ ಉತ್ಪನ್ನದ ಶೇ. 75ರಷ್ಟನ್ನು ರಫ್ತು ಮಾಡಲೇ ಬೇಕು. ಉಳಿದ ಶೇ. 25ರಷ್ಟು ಉತ್ಪಾದನೆಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಇದೇ ಮಾದರಿಯ ಸೆಝ್ ಜಿಲ್ಲೆಗಳನ್ನು ಗುರುತಿಸಲಾಗಿದೆ ಎಂದು ದೇಶ ಪಾಂಡೆ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications