ಕುಡ್ತಿನಿ ವಿದ್ಯುತ್ ಕೇಂದ್ರದ ಕಾಮಗಾರಿಗೆ ಸಮೀಪದಲ್ಲೇ ಕಂಕಣ
ಕುಡ್ತಿನಿ ವಿದ್ಯುತ್ ಕೇಂದ್ರದ ಕಾಮಗಾರಿಗೆ ಸಮೀಪದಲ್ಲೇ ಕಂಕಣ
ಡಿಸೆಂಬರ್ ವೇಳೆಗೆ ವಿದ್ಯುತ್ ಕೇಂದ್ರದ ಕಾಮಗಾರಿ ಆರಂಭ
ಕುಡ್ತಿನಿ ಕೇಂದ್ರವು ರೆಡಿಯಾದಲ್ಲಿ 500 ಮೆಗಾ ವ್ಯಾಟ್ ವಿದ್ಯುತ್ ರಾಜ್ಯದ ವಿದ್ಯುತ್ ಜಾಲಕ್ಕೆ ಸೇರ್ಪಡೆಯಾಗಲಿದೆ. ಯೋಜನೆಯ ಕಾಮಗಾರಿಗೋಸ್ಕರ ಈಗಾಗಲೇ ಜಾಗತಿಕ ಟೆಂಡರ್ ಕರೆಯಲಾಗಿದೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಕೇಂದ್ರದ ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಲಿದೆ. ಒಟ್ಟಿನಲ್ಲಿ ಒಂದು ವರ್ಷದೊಳಗೆ ಕುಡ್ತಿನಿಯ ಕೆಲಸ ಮುಕ್ತಾಯವಾಗುವ ನಿರೀಕ್ಷೆಯಿದೆ ಎಂದು ಅಲ್ಲಂ ವೀರಭದ್ರಪ್ಪ ತಿಳಿಸಿದ್ದಾರೆ.
ಕುಡ್ತಿನಿಯದು ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ಕೇಂದ್ರ. ಈಗಾಗಲೇ ರೂಪಿಸಲಾಗಿರುವ ಯೋಜನೆಯ ಪ್ರಕಾರ ಕಾಮಗಾರಿಗಳು ನಡೆಯಲಿವೆ. ಕೇಂದ್ರಕ್ಕಾಗಿ ಸ್ವಾಧೀನಪಡಿಸಿಕೊಂಡ ಜಾಗದ ಮಾಲಿಕರ ಮನೆಯವರಿಗೂ ಈ ಕಾಮಗಾರಿಯಲ್ಲಿ ದುಡಿಯುವ ಅವಕಾಶ ನೀಡಲಾಗುವುದು ಎಂದು ಸಚಿವರು ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications