ಬೆಳಗಾವಿ : 5.9ಕೋಟಿ ರು. ವೆಚ್ಚದಲ್ಲಿ ಸಕ್ಕರೆ ಅಭಿವೃದ್ಧಿ ಕೇಂದ್ರ
ಬೆಳಗಾವಿ : 5.9ಕೋಟಿ ರು. ವೆಚ್ಚದಲ್ಲಿ ಸಕ್ಕರೆ ಅಭಿವೃದ್ಧಿ ಕೇಂದ್ರ
ಕೇಂದ್ರದ ಸ್ಥಾಪನೆಗೆ 26 ಎಕರೆ ಭೂಮಿ ವೀಕ್ಷಣೆ
ಸಕ್ಕರೆ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು 26 ಎಕರೆ ಜಾಗವನ್ನು ರಾಜ್ಯ ಸರಕಾರ ಗುರುತಿಸಿದ್ದು, ಕೇಂದ್ರದ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಪಶು ಸಂಗೋಪನಾ ಹಾಗೂ ಸಕ್ಕರೆ ಸಚಿವ ಎಂ. ಮಹದೇವ ತಿಳಿಸಿದರು. ಸೋಮವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಮಾರುತಿ ರಾವ್ ಅವರ ಪ್ರಶ್ನೆಗೆ ಸಚಿವ ಮಹದೇವ ಉತ್ತರಿಸುತ್ತಿದ್ದರು.
ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಪ್ರಾದೇಶಿಕ ಸಕ್ಕರೆ ಅಭಿವೃದ್ಧಿ ಕೇಂದ್ರಕ್ಕಾಗಿ 590 ಲಕ್ಷ ರೂಪಾಯಿಗಳನ್ನು ಪ್ರತ್ಯೇಕವಾಗಿ ತೆಗೆದಿರಿಸಲಾಗಿದೆ. ಕೇಂದ್ರದ ಅನುಮತಿ ದೊರೆತ ತಕ್ಷಣವೇ ಜಾಗ ಸ್ವಾಧೀನ ಕಾರ್ಯವನ್ನು ಆರಂಭಿಸಲಾಗುವುದು ಎಂದು ಮಹದೇವ್ ಹೇಳಿದರು.
ಬೆಳಗಾವಿಯಲ್ಲಿ ಸಕ್ಕರೆ ಅಭಿವೃದ್ಧಿ ಕೇಂದ್ರದ ಸ್ಥಾಪನೆಯಿಂದಾಗಿ ಸರ್ಕಾರದ ಪ್ರಾದೇಶಿಕ ಸಮಾನತೆಯ ಘೋಷಣೆಗೆ ಒಂದಿಷ್ಟು ಬಲ ಬಂದಂತಾಗುತ್ತದೆ. ಆದರೆ, ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗುವುದು ಯಾವಾಗ ?
(ಪಿಟಿಏ)
ಮುಖಪುಟ / ವಾರ್ತೆಗಳು












Click it and Unblock the Notifications