ಸ್ನೇಹ ರೂಪಕದ ಹೃದಯದೊಂದಿಗೆ ನೂರ್‌ಫಾತಿಮಾ ಪಾಕ್‌ನತ್ತ

ಸ್ನೇಹ ರೂಪಕದ ಹೃದಯದೊಂದಿಗೆ ನೂರ್‌ಫಾತಿಮಾ ಪಾಕ್‌ನತ್ತ
ನೂರ್‌ ಈಗ ಪೂರ್ಣ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನ ನಡುವಣ ಮಾನವಿಕ ಸಂಬಂಧಗಳಿಗೆ ಸೇತುವಾಗಿ ಪರಿಣಮಿಸಿರುವ ಎರಡೂವರೆ ವರ್ಷದ ಬಾಲಕಿ ನೂರ್‌ ಫಾತಿಮಾಳನ್ನು 17 ದಿನಗಳ ಚಿಕಿತ್ಸೆಯ ನಂತರ ಗುರುವಾರ (ಜು.31) ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ದೆಹಲಿ- ಲಾಹೋರ್‌ ಬಸ್‌ನಲ್ಲಿ ನೂರ್‌ ಫಾತಿಮ ತನ್ನ ಪೋಷಕರೊಂದಿಗೆ ಜುಲೈ 11ರಂದು ಭಾರತಕ್ಕೆ ಬಂದಿದ್ದಳು. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ತೆರೆದ ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ನೂರ್‌ ಫಾತಿಮಾ ಈಗ ಸಂಪೂರ್ಣ ಚೇತರಿಸಿಕೊಂಡಿದ್ದು , ಆಕೆಯನ್ನು ಆಸ್ಪತ್ರೆಯ ಸಿಬ್ಬಂದಿ ಗುರುವಾರ ಬೆಳಗ್ಗೆ ಶುಭ ಹಾರೈಸಿ ಬೀಳ್ಕೊಟ್ಟಿತು.

ನೂರ್‌ ಈಗ ಆರೋಗ್ಯದಿಂದ್ದಾಳೆ. ಪಾಕಿಸ್ತಾನಕ್ಕೆ ಮರಳಿದ ನಂತರ ನೂರ್‌ ಫಾತಿಮಾ ಮಾಡಬೇಕಾದ ಲಘು ವ್ಯಾಯಾಮ ಹಾಗೂ ತೆಗೆದುಕೊಳ್ಳಬೇಕಾದ ಚಿಕಿತ್ಸೆಯ ಬಗ್ಗೆ ಆಕೆಯ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ನಾರಾಯಣ ಹೃದಯಾಲಯದ ಮೂಲಗಳು ತಿಳಿಸಿವೆ. ಫಾತಿಮಾಳ ಮುಂದಿನ ಚಿಕಿತ್ಸೆಯನ್ನು ಲಾಹೋರ್‌ನ ವೈದ್ಯ ಮಸೂದ್‌ ಸಾದಿಕ್‌ ಮುಂದುವರೆಸುವರು.

ಅಮ್ಮ ತಯ್ಯಬಾ ನದೀಮ್‌ ಹಾಗೂ ಅಪ್ಪ ನದೀಮ್‌ ಸಯ್ಯದ್‌ ಜೊತೆ ಪುಟಾಣಿ ನೂರ್‌ ಫಾತಿಮಾ ಖಾಸಗಿ ವಿಮಾನದಲ್ಲಿ ದೆಹಲಿಗೆ ತೆರಳಿ, ಅಲ್ಲಿಂದ ದೆಹಲಿ-ಲಾಹೋರ್‌ ಬಸ್‌ನಲ್ಲಿ ಶುಕ್ರವಾರ ಪಾಕಿಸ್ತಾನಕ್ಕೆ ಮರಳುವ ನಿರೀಕ್ಷೆಯಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+