ಜು.31ಕ್ಕೆ ರವೀಂದ್ರಕಲಾಕ್ಷೇತ್ರದಲ್ಲಿ ಮೊಹಮ್ಮದ್‌ ರಫಿ ಹಾಡುಗಳು

ಜು.31ಕ್ಕೆ ರವೀಂದ್ರಕಲಾಕ್ಷೇತ್ರದಲ್ಲಿ ಮೊಹಮ್ಮದ್‌ ರಫಿ ಹಾಡುಗಳು
ರಮ್ಯ ಕಲ್ಚರಲ್‌ ಅಕಾಡೆಮಿ ಈ ಅಪರೂಪದ ಕಾರ್ಯಕ್ರಮ ಆಯೋಜಿಸಿದೆ

ಹಿಂದಿ ಸಿನಿಮಾ ಗಾಯಕ ಮೊಹಮ್ಮದ್‌ ರಫಿ ಅವರನ್ನು ಇಷ್ಟಪಡದವರಾರು? ‘ಯೇ ಮೇರಾ ಪ್ರೇಮ್‌ ಪತ್ರ್‌ ಪಡ್‌ಕರ್‌‘, ‘ಆಜ ಆಜಾ ಮೇಹೂ ಪ್ಯಾರ್‌ ತೇರಾ’, ‘...ತಾರೀಫ್‌ ಕರೂ ಕ್ಯಾ ಉಸ್‌ಕೀ ಜಿಸ್‌ನೇ ತುಮ್ಹೆ ಬನಾಯಾ’, ‘ಕರ್‌ ಚಲೇ ಹಮ್‌ ಫಿದಾ ಜಾನ್‌ ವತನ್‌ ಸಾಥಿಯಾ’- ಹೀಗೆ ಗುನುಗಿದಷ್ಟೂ ರಫಿ ಗೀತೆಗಳು ನೆನಪಾಗುತ್ತಲೇ ಹೋಗುತ್ತವೆ. ಕೆಲವು ಕಣ್ಣಲ್ಲಿ ನೀರು ತುಂಬಿಸುವಷ್ಟು ಶಕ್ತ. ಬರೀ ರಫಿ ಹಾಡುಗಳನ್ನಷ್ಟೇ ಕೇಳುವ ಅವಕಾಶ ಒದಗಿಬಂದರೆ ಎಷ್ಟು ಚೆನ್ನ ಅಲ್ಲವೇ?

Mohammed Rafiಅಂಥ ಚೆನ್ನಾದ ಅವಕಾಶವನ್ನು ರಮ್ಯ ಕಲ್ಚರಲ್‌ ಅಕಾಡೆಮಿ ಏರ್ಪಡಿಸಿದೆ. ತನ್ನ 10ನೇ ವಾರ್ಷಿಕೋತ್ಸವವನ್ನು ಅಕಾಡೆಮಿ ಅರ್ಥಪೂರ್ಣವಾಗಿ ಆಚರಿಸಲು ತಯಾರಿ ನಡೆಸಿದೆ. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಣಕಾಸಿನ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗುವ ಉಮೇದಿ ಇಟ್ಟುಕೊಂಡಿರುವ ರಮ್ಯ ಕಲ್ಚರಲ್‌ ಅಕಾಡೆಮಿಗೆ ರಫಿ ಅವರ ಹಾಡುಗಳನ್ನು ಕೇಳಿಸುವುದರ ಜೊತೆಗೆ ನಿಮಗೆ ವಿದ್ಯಾದಾನ ಮಾಡುವ ಅವಕಾಶವನ್ನೂ ಕಲ್ಪಿಸಿಕೊಡುತ್ತಿದೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ 31ನೇ ತಾರೀಕು ರಫಿ ಹಾಡುಗಳ ರಸಮಂಜರಿ. ರಾತ್ರಿ 9.30ರಿಂದ ಕಾರ್ಯಕ್ರಮ ಶುರುವಾಗುತ್ತದೆ. ಇಂದಿರಾನಗರ ಹಾಗೂ ಬಸವನಗುಡಿಯ ‘ಬಟರ್‌ಸ್ಪಾಂಜ್‌’, ಜಯನಗರದ ಕಲಾಪ್ಸೋ, ಚಾನೆಲ್‌ 9, ಚರ್ಚ್‌ ಸ್ಟ್ರೀಟ್‌ನ ಕೆ.ಸಿ.ದಾಸ್‌, ಮಲ್ಲೇಶ್ವರಂನ ಕೆನರಾ ಯೂನಿಯನ್‌, ವಿಜಯನಗರ ಕ್ಲಬ್‌ ಮತ್ತು ಮ್ಯೂಸಿಕಲ್‌ ವರ್ಲ್ಡ್‌ ಮಳಿಗೆಗಳಲ್ಲಿ ರಸಮಂಜರಿ ಕಾರ್ಯಕ್ರಮದ ಟಿಕೇಟುಗಳು ಸಿಗುತ್ತವೆ. ಟಿಕೇಟು ಬೆಲೆ 50, 100 ಹಾಗೂ 250 ರುಪಾಯಿ.

ಅಂದಹಾಗೆ, ರಫಿ ಅವರ ಹಾಡುಗಳನ್ನು ಸಲೀಂ, ಜಿಂಪೆಟ್ಸ್‌ ಮೋಹನ್‌ ಮೊದಲಾದವರು ಹಾಡಲಿದ್ದಾರೆ. ಯುಗಳ ಗೀತೆಗಳಿಗೆ ಚಂದ್ರಿಕಾ ಗುರುರಾಜ್‌ ಜೊತೆಯಾಗಲಿದ್ದಾರೆ.

ಹೆಚ್ಚಿನ ಮಾಹಿತಿಗೆ ಫೋನ್‌ ಮಾಡಿ- (080) 6760713/ 6762517/ 9844064152.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+