ಹೈ ರಿಸ್ಕ್‌ ಸೆಕ್ಸು : ಪ್ರತಿವರ್ಷ 250 ಬೆಂಗಳೂರು ಹುಡುಗರಿಗೆ ಏಡ್ಸ್‌

ಹೈ ರಿಸ್ಕ್‌ ಸೆಕ್ಸು : ಪ್ರತಿವರ್ಷ 250 ಬೆಂಗಳೂರು ಹುಡುಗರಿಗೆ ಏಡ್ಸ್‌
15- 16 ವಯಸ್ಸಿನ ಪಡ್ಡೆಗಳ ಲೈಂಗಿಕ ಹಪಾಹಪಿಗೆ ಕಡಿವಾಣ ಹಾಕುವುದೆಂತು?

ಬೆಂಗಳೂರು : ಕೊಳಗೇರಿ ಮತ್ತು ಫುಟ್‌ಪಾತಿನ ಮೇಲೆ ವಾಸಿಸುವ ಸುಮಾರು 200- 250 ಪಡ್ಡೆ ಹುಡುಗರು ಪ್ರತಿವರ್ಷ ಬೆಂಗಳೂರಲ್ಲಿ ಎಚ್‌ಐವಿ ಸೋಂಕಿಗೆ ಸಿಲುಕುತ್ತಿದ್ದಾರೆ !

ಬೀದಿಮಕ್ಕಳು ಮತ್ತು ಕೊಳಗೇರಿ ಮಕ್ಕಳಲ್ಲಿ ಲೈಂಗಿಕ ಅಭಿವೃದ್ಧಿ ಮತ್ತು ಲೈಂಗಿಕ ಆರೋಗ್ಯ ಎಂಬ ವಿಚಾರ ಇಟ್ಟುಕೊಂಡು ಸಾಮಾಜಿಕ ಕಳಕಳಿಯನ್ನು ಜನಪ್ರಿಯಗೊಳಿಸುವ ಉಮೇದಿಯ ಎಪಿಸಿಎ ಮತ್ತು ಯೂತ್‌ ಇನ್‌ಸೆಂಟಿವ್ಸ್‌ ಆಫ್‌ ನೆದರ್‌ಲ್ಯಾಂಡ್ಸ್‌ ಸಂಸ್ಥೆಗಳು 4 ದಿನಗಳ ಸಮಾವೇಶ ಜುಲೈ 22 ರಿಂದ ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದು - ಮೊದಲ ದಿನ ಸಮಾವೇಶದಲ್ಲಿ ಮಾತಾಡಿದ ನಿಮ್ಹಾನ್ಸ್‌ನ ಅಡಿಶನಲ್‌ ಪ್ರೊಫೆಸರ್‌ ಶೇಖರ್‌ ಶೇಷಾದ್ರಿ ಏಡ್ಸ್‌ಗೆ ತುತ್ತಾಗುತ್ತಿರುವ ಮಕ್ಕಳ ವಿವರಗಳನ್ನು ಕೊಟ್ಟರು.

ಸಾಮಾನ್ಯವಾಗಿ ಶಾಲೆಗೆ ಹೋಗದ, ಯಾವುದೇ ಸರಿಯಾದ ಕೆಲಸವೂ ಇಲ್ಲದ ಅತಂತ್ರ ಸ್ಥಿತಿಯಲ್ಲಿರುವ 15- 16 ವಯಸ್ಸಿನ ಹುಡುಗರ ಮನಸ್ಸು ಕ್ಷೋಭೆಗೆ ಸಿಲುಕುತ್ತದೆ. ಹೀಗಾದಾಗ ಮನಸ್ಸಿನ ಮೇಲೆ ವಿಚಿತ್ರ ಒತ್ತಡ ಬಿದ್ದು, ‘ಹೈ ರಿಸ್ಕ್‌ ಲೈಂಗಿಕ ಚಟುವಟಿಕೆ’ಗೆ ತೊಡಗುತ್ತಾರೆ. ಇಂಥವರನ್ನು ನಾಗರಿಕರು ಇನ್ನಷ್ಟು ದೂರ ಮಾಡಿದರೆ ಮನಸ್ಸು ಇನ್ನಷ್ಟು ಹಾಳಾಗುತ್ತದೆ. ಜೀವನದ ಜಂಜಡಗಳನ್ನು ಎದುರಿಸಲು ಇವರಿಗೆ ಬೇಕಾದಂಥ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಆಗಬೇಕು. ಏಡ್ಸ್‌ ಜಾಗೃತಿಯ ಕಾರ್ಯಕ್ರಮದಿಂದಷ್ಟೇ ಇವರ ಮನ ಪರಿವರ್ತಿಸುವುದು ಸಾಧ್ಯವಿಲ್ಲದ ಮಾತು ಎಂದು ಶೇಷಾದ್ರಿ ಹೇಳಿದರು.

ಕೇರಳದಲ್ಲಿ 60 ಸ್ವಯಂ ಸೇವಕರು ಕೊಳಗೇರಿಗಳ ಹುಡುಗರ ಯೋಚನೆಯ ದಿಕ್ಕನ್ನು ಬದಲಿಸುವ ಕೆಲಸ ಮಾಡುತ್ತಿದ್ದಾರೆ. ಆಪತ್ಕಾರೀ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವ ಈ ಹುಡುಗರು ವಾರಕ್ಕೆ ಇಬ್ಬರು- ಮೂವರು ಹೆಂಗಸರ ಸಹವಾಸ ಮಾಡುತ್ತಾರೆ. ಇಂಥವರಿಗೆ ಲೈಂಗಿಕ ಚಟುವಟಿಕೆಯನ್ನು ಸಂಪೂರ್ಣ ನಿಲ್ಲಿಸಿ ಎಂದು ಪಾಠ ಹೇಳಿದರೆ ಖಂಡಿತ ತಲೆಗೆ ಹೋಗುವುದಿಲ್ಲ. ಬದಲಿಗೆ, ಒಂದೇ ಹೆಣ್ಣಿನ ಜೊತೆ ಸಂಬಂಧ ಇಟ್ಟುಕೊಳ್ಳಿ ಎಂದು ಹೇಳಿ, ಕಾಂಡೋಮ್‌ ಬಳಕೆಯ ಬಗ್ಗೆ ತಿಳಿಹೇಳಬಹುದು. ಕೇರಳದಲ್ಲಿ ಇಂಥಾ ಕೆಲಸ ನಡೆಯುತ್ತಿದೆ. ಕರ್ನಾಟಕದಲ್ಲೂ ನಡೆಯಬೇಕು. ಅದಕ್ಕೆ ಸ್ವಯಂ ಸೇವಕರು ಮನಸ್ಸು ಮಾಡಬೇಕು ಎಂದು ಶೇಷಾದ್ರಿ ಕಿವಿ ಮಾತು ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+