ತಿರುಪತಿಯಲ್ಲಿ ಸೇವಾ ಟಿಕೇಟು ರಾಕೆಟ್, 1 ಟಿಕೆಟ್ಟಿಗೆ 1 ಸಾವಿರ ರು. !
ತಿರುಪತಿಯಲ್ಲಿ ಸೇವಾ ಟಿಕೇಟು ರಾಕೆಟ್, 1 ಟಿಕೆಟ್ಟಿಗೆ 1 ಸಾವಿರ ರು. !
ಇದೊಂದು ಸೈಬರ್ ಅಪರಾಧ ಜಾಲ
ಚೆನ್ನೈನ ಬಾಲಾಜಿ ಟ್ರಾವೆಲ್ ಏಜೆನ್ಸಿ, ವಿಜಯ ಬ್ಯಾಂಕ್‌ನ ಕೆಲವು ಅಧಿಕಾರಿಗಳು ಮತ್ತು ಬ್ಯಾಂಕು ಗೊತ್ತು ಮಾಡಿದ್ದ ಎರಡು ಖಾಸಗಿ ಏಜೆನ್ಸಿಗಳು ಅಕ್ರಮ ಟಿಕೇಟು ಮಾರಾಟದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಇಡೀ ಪ್ರಕರಣದ ಸಮಗ್ರ ತನಿಖೆಯನ್ನು ಈಗ ರಾಜ್ಯ ಸೈಬರ್ ಅಪರಾಧ ಪತ್ತೆ ವಿಭಾಗಕ್ಕೆ ವಹಿಸಲಾಗಿದೆ.
ತಿರುಪತಿಯಲ್ಲಿ ಸೇವಾ ಟಿಕೇಟು ನೀಡುವ ಅನುಮತಿಯಿರುವ ಏಕೈಕ ಬ್ಯಾಂಕು ವಿಜಯಾ ಬ್ಯಾಂಕು. ಈ ಬ್ಯಾಂಕಿನಲ್ಲಿ ಕಂಪ್ಯೂಟರ್ ಮೂಲಕ ಕೊಡುವ ಟಿಕೇಟುಗಳಿಗೆ ನಿಯಂತ್ರಣವಿರುತ್ತದೆ. ದಿನಕ್ಕೆ ಇಂತಿಷ್ಟೇ ಟಿಕೇಟು ವಿತರಣೆಯಾಗಬೇಕು ಎಂದು ಮೊದಲೇ ನಿರ್ಧರಿತವಾಗಿರುತ್ತದೆ. ಆದರೆ, ಅದನ್ನು ಮೀರಿ ಟಿಕೇಟು ಕೊಡಮಾಡಿರುವುದು ಬುಧವಾರ (ಜು.16) ಅಧಿಕಾರಿಗಳ ಗಮನಕ್ಕೆ ಬಂತು. ನಿಗದಿ ಪಡಿಸಿದ್ದಕ್ಕಿಂತ ಒಂದು ಹೆಚ್ಚುವರಿ ಸೇವಾ ಟಿಕೇಟನ್ನು 1 ಸಾವಿರ ರುಪಾಯಿಗೆ ಮಾರಿರುವುದು ಪತ್ತೆಯಾಯಿತು.
ಹಾಗೆಯೇ ಲಾಡುಗಳ ಮಾರಾಟದಲ್ಲೂ ಅವ್ಯವಹಾರ ನಡೆದಿರುವ ಅನುಮಾನವಿದೆ. ಚೆನ್ನೈನ ಬಾಲಾಜಿ ಟ್ರಾವೆಲ್ ಏಜೆನ್ಸಿ ಸೇವಾ ಟಿಕೇಟುಗಳನ್ನು ಕೊಡಿಸುವುದಾಗಿ ಪ್ರಯಾಣಿಕರನ್ನು ಕರೆ ತಂದು, ಹೆಚ್ಚು ದುಡ್ಡು ವಸೂಲು ಮಾಡಿ, ಅಕ್ರಮ ರೀತಿಯಲ್ಲಿ ಸೇವಾ ಟೀಕೇಟುಗಳನ್ನು ಮಾರಿದೆ. ಈ ಪ್ರಕರಣದಲ್ಲಿ ಯಾರು ಯಾರು ಶಾಮೀಲಾಗಿದ್ದಾರೆ ಎಂದು ಪತ್ತೆ ಮಾಡಲು ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications