ಪ್ರತಿಷ್ಠಿತ ಆರ್‌ಬಿಐ ಗವರ್ನರ್ ಸ್ಥಾನಕ್ಕೆ ವೈ.ವೇಣುಗೋಪಾಲ ರೆಡ್ಡಿ
ಪ್ರತಿಷ್ಠಿತ ಆರ್‌ಬಿಐ ಗವರ್ನರ್ ಸ್ಥಾನಕ್ಕೆ ವೈ.ವೇಣುಗೋಪಾಲ ರೆಡ್ಡಿ
ಅವಧಿಗೆ ಮುನ್ನವೇ ಹುದ್ದೆ ತೆರವು ಮಾಡಲು ಬಿಮಲ್ ಜಲನ್ ನಿರ್ಧಾರ
ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಧ್ಯಕ್ಷತೆಯಲ್ಲಿ ಜುಲೈ18ರ ಶುಕ್ರವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ವೇಣುಗೋಪಾಲ್ ಅವರನ್ನು ಆರ್‌ಬಿಐನ ಮುಂದಿನ ಗವರ್ನರ್ ಆಗಿ ನೇಮಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ವೇಣುಗೋಪಾಲ್ ಅವರ ನೇಮಕಾತಿಯನ್ನು ಹಣಕಾಸು ಇಲಾಖೆ ಸದ್ಯದಲ್ಲಿಯೇ ಅಧಿಕೃತವಾಗಿ ಘೋಷಿಸಲಿದೆ. 1964ರ ಬ್ಯಾಚಿನ ಐಎಎಸ್ ಅಧಿಕಾರಿ ವೇಣುಗೋಪಾಲ್ ಆರ್‌ಬಿಐನಲ್ಲಿ ಸಹಾಯಕ ಗವರ್ನರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅವರ ಅಧಿಕೃತ ನೇಮಕಾತಿಯ ದಿನಾಂಕವನ್ನು ಇನ್ನೂ ಪ್ರಕಟಿಸಲಾಗಿಲ್ಲ.
ಪ್ರಸ್ತುತ ಆರ್‌ಬಿಐ ಗವರ್ನರ್ ಬಿಮಲ್ ಜಲನ್ ಅವಧಿಗೆ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಉದ್ದೇಶಿಸಿರುವುದಾಗಿ ಹಣಕಾಸು ಇಲಾಖೆಯ ಮೂಲಗಳು ಶುಕ್ರವಾರ ತಿಳಿಸಿವೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications