ಬುಷ್‌ಗೆ ಎನ್‌ಐರ್‌ಐ ವೈದ್ಯರ ಬಲ

ಚುನಾವಣಾ ಪ್ರಚಾರಕ್ಕೆ ಕನಿಷ್ಠ 2 ಲಕ್ಷ ಡಾಲರ್ ಅಥವಾ ಅದಕ್ಕಿಂತ ಹೆಚ್ಚು ದೇಣಿಗೆ ಸಂಗ್ರಹಿಸಿಕೊಡುವ 18 ಮಂದಿಯನ್ನು ರೇಂಜರ್ಸ್ ಎಂದು ಕರೆಯುತ್ತಾರೆ. ಈ ಪೈಕಿ ಝಚಾರಿಯ ಕೂಡ ಒಬ್ಬರು. ಹೃದ್ರೋಗ ತಜ್ಞರಾಗಿರುವ ಝಚಾರಿಯ ರಿಪಬ್ಲಿಕನ್ಸ್ ಪಕ್ಷದ ಕಟ್ಟಾ ಬೆಂಬಲಿಗ.
ಕಳೆದ ಮೂರು ತಿಂಗಳಲ್ಲಿ ಬುಷ್ 34.4 ದಶಲಕ್ಷ ಡಾಲರ್ ಹಣವನ್ನು ಚುನಾವಣಾ ಪ್ರಚಾರಕ್ಕಾಗಿ ಸಂಗ್ರಹಿಸಿದ್ದಾರೆ. ಒಟ್ಟು 1 ಲಕ್ಷದ 5 ಸಾವಿರ ಮಂದಿ ಈ ಹಣವನ್ನು ಕೊಟ್ಟಿದ್ದಾರೆ. 1 ಲಕ್ಷ ಡಾಲರ್‌ಗಿಂತ ಹೆಚ್ಚು ಡಾಲರ್ ಸಂಗ್ರಹಿಸಿರುವ ಬುಷ್ ಬೆಂಬಲಿಗರನ್ನು ಪಯನೀರ್‌ಗಳೆಂದು ಕರೆಯಲಾಗುತ್ತಿದೆ. ಒಟ್ಟು 68 ಪಯನೀರ್‌ಗಳು ಬುಷ್ ಗೆಲ್ಲಿಸಲು ಪ್ರಚಾರದಲ್ಲಿ ತೊಡಗಿದ್ದಾರೆ.
ರಿಪಬ್ಲಿಕನ್ ಪಕ್ಷಕ್ಕೆ ಸಮಬಲ ತೋರುವ ಡೆಮಾಕ್ರಟಿಕ್ ಪಕ್ಷ ಕೂಡ ತಾನೇನೂ ಕಡಿಮೆಯಿಲ್ಲ ಎಂಬಂತೆ ಒಟ್ಟು 31 ದಶಲಕ್ಷ ಡಾಲರ್ ಮೊತ್ತ ಸಂಗ್ರಹಿಸಿದೆ.
ವರ್ಮೌಂಟ್‌ನ ಮಾಜಿ ಗವರ್ನರ್ ಹಾವರ್ಡ್ ಡೀನ್ 7.6 ದಶಲಕ್ಷ ಡಾಲರ್ ಹಣ ಸಂಗ್ರಹಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದವರಾಗಿ ಟಿಕೇಟು ಪಡೆಯುವ ಹೆಚ್ಚು ಭರವಸೆ ಹುಟ್ಟಿಸಿರುವ ಕಾಂಗ್ರೆಸ್‌ಮನ್ ರಿಚರ್ಡ್ ಝೆಫಾರ್ಟ್ 6.3 ದಶಲಕ್ಷ ಹಾಗೂ ಸೆನೆಟರ್ ಜಾನ್ ಎಫ್. ಕೆರ್ರಿ 5.9 ದಶಲಕ್ಷ ಡಾಲರ್ ಹಣ ಕೂಡಿಸಿಕೊಂಡಿದ್ದಾರೆ. ಇಷ್ಟು ಮೊತ್ತವನ್ನು ಇವರೆಲ್ಲ ಕಳೆದ ಮೂರು ತಿಂಗಳಲ್ಲಿ ಸಂಗ್ರಹಿಸಿದ್ದು, ಚುನಾವಣೆಗೆ ಟಿಕೇಟು ಗಿಟ್ಟಿಸಿಕೊಳ್ಳಲು ಪೋಟಿ ನಡೆಸಿದ್ದಾರೆ.
ಡೆಮಾಕ್ರಟಿಕ್ ಪಕ್ಷದವರಾಗಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧವಿರುವ 9 ರಾಜಕಾರಣಿಗಳ ಪೈಕಿ 7 ಮಂದಿ ಅಮೆರಿಕೆಯ ದೊಡ್ಡ ಸಂಸ್ಥೆಯಾದ 'ಗೇ (ಸಲಿಂಗಿ ಪುರುಷರು) ರೈಟ್ಸ್ ಆರ್ಗನೈಝೇಷನ್"ಗೆ ಭೇಟಿ ಕೊಟ್ಟರು. ತಮ್ಮನ್ನು ಅಧ್ಯಕ್ಷ ಗಾದಿಗೆ ಆರಿಸಿದರೆ ವಾಷಿಂಗ್ಟನ್‌ನಲ್ಲಿರುವ ಈ ಸಂಸ್ಥೆಯ ಸದಸ್ಯರ ಹಿತರಕ್ಷಣೆ ಮಾಡುವುದಾಗಿ ಮಾತು ಕೊಟ್ಟರು. ಒಹಿಯೋದ ಕಾಂಗ್ರೆಸ್‌ಮನ್ ಡೆನ್ನಿಸ್ ಜೆ. ಕುಸಿನಿಚ್, ಇಲಿನಾಯ್ಸ್‌ನ ಮಾಜಿ ಸೆನೆಟರ್ ಕಾರ್ಲೋ ಮೋಸ್ಲಿ ಬ್ರೌನ್ ಮತ್ತು ನ್ಯೂಯಾರ್ಕ್‌ನ ಅಲ್ ಶಾರ್ಪ್‌ಟನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಲಿಂಗ ಪುರುಷರ ಮದುವೆಗೆ ಬೆಂಬಲ ಸೂಚಿಸಿದರು. ಕೆನಡಾದಲ್ಲಿ ಸಲಿಂಗ ಪುರುಷರ ಮದುವೆಗಳು ಈಗ ಸಾಮಾನ್ಯ. ಸೆನೆಟರ್‌ಗಳಾದ ಜಾನ್ ಎಡ್ವರ್ಡ್ ಮತ್ತು ಬಾಬ್ ಗ್ರಹಾಂ 'ಗೇ ರೈಟ್ಸ್ ಫೋರಂ"ಗೆ ಹಾಜರಾಗಲಿಲ್ಲ.












Click it and Unblock the Notifications