ಬಚಾವ್ ! ವಿಶ್ವಪರಂಪರೆ ಪಟ್ಟಿಯಲ್ಲಿ ಹಂಪಿ ಉಳಕೊಂಡಿದೆ
ಬಚಾವ್ ! ವಿಶ್ವಪರಂಪರೆ ಪಟ್ಟಿಯಲ್ಲಿ ಹಂಪಿ ಉಳಕೊಂಡಿದೆ
ಅಪಾಯದಲ್ಲಿರುವ ಸ್ಮಾರಕಗಳ ಪಟ್ಟಿಯಲ್ಲಿ ಹಂಪಿ
1986ರಲ್ಲಿ ವಿಶ್ವ ಪರಂಪರೆಯ ಪಟ್ಟಿಯಲ್ಲಿದ್ದ ಹಂಪಿಯನ್ನು 1999ರಲ್ಲಿ ಅಪಾಯದಲ್ಲಿರುವ ಸ್ಮಾರಕಗಳ ಪಟ್ಟಿಗೆ ಸೇರಿಸಲಾಗಿತ್ತು. ಇತ್ತೀಚೆಗೆ ವಿಶ್ವ ಪರಂಪರೆ ಪಟ್ಟಿಯಿಂದಲೇ ಹಂಪಿಯನ್ನು ಕಿತ್ತು ಹಾಕುವ ಭೀತಿ ಇತ್ತು. ಹಂಪಿಯ ಅಭಿವೃದ್ದಿಗೆ ಯುನೆಸ್ಕೋ ಹಲವು ಕ್ರಮಗಳನ್ನು ಸೂಚಿಸಿದ್ದು, ಯಾವುದೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪಟ್ಟಿಯಿಂದ ಕೈ ಬಿಡುವ ಬೆದರಿಕೆಯನ್ನೂ ಹಾಕಿತ್ತು.
ವಿರೂಪಾಪುರ ಗಡ್ಡೆ ಬಳಿ ಸೇತುವೆ ಒಡೆಯುವುದು, ಮತ್ತೊಂದು ಸೇತುವೆಯ ಸಂಚಾರ ನಿರ್ಬಂಧ, ಪ್ರತ್ಯೇಕ ಉಪ ರಸ್ತೆ ನಿರ್ಮಿಸಿ ಹಂಪಿ ಸ್ಮಾರಕಗಳಿಗೆ ಸಾರಿಗೆ ಸಂಚಾರದಿಂದಾಗುವ ಹಾನಿ ತಡೆಗಟ್ಟುವ ಯುನೆಸ್ಕೋ ಶಿಫಾರಸ್ಸನ್ನು ಸರಕಾರ ಒಪ್ಪಿಕೊಂಡಿದ್ದು, ಈ ಕುರಿತ ಕಾಮಗಾರಿಗಳು ಚಾಲ್ತಿಯಲ್ಲಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications