ಐಐಎಸ್ಸಿಯ ಮಾಧವ ಗಾಡ್ಗೀಳ್‌ಗೆ ವೊಲ್ವೋ ಪರಿಸರ ಪ್ರಶಸ್ತಿ
ಐಐಎಸ್ಸಿಯ ಮಾಧವ ಗಾಡ್ಗೀಳ್‌ಗೆ ವೊಲ್ವೋ ಪರಿಸರ ಪ್ರಶಸ್ತಿ
ಸ್ವೀಡನ್‌ನ ಪ್ರತಿಷ್ಠಿತ ಪ್ರಶಸ್ತಿಯ ಮೊತ್ತ 110 ಲಕ್ಷ ರೂಪಾಯಿ !
ಗಾಡ್ಗೀಳ್ ಹಾಗೂ ಬಾಂಗ್ಲಾ ದೇಶದ ಡಾ. ಮಹಮ್ಮದ್ ಯೂನಸ್ ಅವರಿಗೆ ಈ ಬಾರಿಯ ವೊಲ್ವೋ ಪರಿಸರ ಪ್ರಶಸ್ತಿ ನೀಡಲಾಗುತ್ತಿದೆ ಎಂದು ವೊಲ್ವೋ ಪರಿಸರ ಪ್ರಶಸ್ತಿ ಸಮಿತಿಯ ಪ್ರಕಟಣೆ ತಿಳಿಸಿದೆ. ಡಾ. ಗಾಡ್ಗೀಳರು ವಿಶೇಷವಾಗಿ ಪಶ್ಚಿಮ ಘಟ್ಟಗಳ ಗಿರಿಜನರ ಮತ್ತು ಗ್ರಾಮೀಣ ಬದುಕಿನ ಅಲ್ಲಿನ ಜೀವ ವೈವಿಧ್ಯ ಹಾಗೂ ಪರಿಸರ ರಕ್ಷಣೆಯ ಅಗತ್ಯ ಎಷ್ಟೆಂಬುದರ ಬಗ್ಗೆ ಅಧ್ಯಯನ ನಡೆಸಿ ಸಂಶೋಧನೆಗಳ ಮೂಲಕ ಸಾಬೀತು ಪಡಿಸಿದ್ದಾರೆ.
ಈಗಾಗಲೇ ಗಾಡ್ಗೀಳ್, ಭಟ್ನಾಗರ್, ಪದ್ಮಶ್ರೀ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಮಹಮ್ಮದ್ ಯೂನಸ್ ಅವರು ಗ್ರಾಮೀಣ ಮಹಿಳೆಯರಿಗಾಗಿ ಗ್ರಾಮೀಣ ಬ್ಯಾಂಕ್ ಜಾಲವನ್ನು ಸ್ಥಾಪಿಸಿ ಕ್ರಾಂತಿ ನಡೆಸಿದ್ದರು.
ಪ್ರಶಸ್ತಿಯು 15 ಲಕ್ಷ ಕ್ರೋನರ್ ಅಂದರೆ ಸುಮಾರು 110 ಲಕ್ಷ ರೂಪಾಯಿ ಮೌಲ್ಯದ್ದಾಗಿದ್ದು, ಈ ಮೊತ್ತವನ್ನು ಇಬ್ಬರಿಗೂ ಸಮಾನವಾಗಿ ಹಂಚಲಾಗುವುದು. ಅಕ್ಟೋಬರ್ 29ರಂದು ಬೆಲ್ಜಿಯಂನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications