ಇನ್ಫೋಸಿಸ್‌ ಲಾಭ 28.25% ಏರಿಕೆ, ಜೋರಾದ ಷೇರು ಬಜಾರು

ಇನ್ಫೋಸಿಸ್‌ ಲಾಭ 28.25% ಏರಿಕೆ, ಜೋರಾದ ಷೇರು ಬಜಾರು
ಮೊದಲ ತ್ರೆೃಮಾಸಿಕದಲ್ಲಿ 10.81 ಶತಕೋಟಿ ರುಪಾಯಿ ನಿವ್ವಳ ಆದಾಯ

ಬೆಂಗಳೂರು : ಜೂನ್‌ 30, 2003ಕ್ಕೆ ಮುಗಿದ ಪ್ರಸಕ್ತ ವಿತ್ತ ವರ್ಷದ ಮೊದಲ ತ್ರೆೃಮಾಸಿಕದಲ್ಲಿ ಸಾಫ್ಟ್‌ವೇರ್‌ ದಿಗ್ಗಜ ಇನ್ಫೋಸಿಸ್‌ ಒಟ್ಟು 2.78 ಶತಕೋಟಿ ರುಪಾಯಿ ಲಾಭ ಗಳಿಸಿದೆ.

ಗುರುವಾರ (ಜು.10) ಕಂಪನಿ ತನ್ನ ವಿತ್ತ ವರದಿಯನ್ನು ಪ್ರಕಟಿಸಿತು. ಕಳೆದ ವರ್ಷದ ಇದೇ ತ್ರೆೃಮಾಸಿಕಕ್ಕೆ ಹೋಲಿಸಿದರೆ ನಿವ್ವಳ ಲಾಭದಲ್ಲಿ 28.25 ಪ್ರತಿಶತ ಏರಿಕೆಯಾಗಿದೆ. ನಿವ್ವಳ ಆದಾಯದಲ್ಲಿ 41.51 ಪ್ರತಿಶತ ಹೆಚ್ಚಳವಾಗಿದ್ದು, ಒಟ್ಟು 10.81 ಶತಕೋಟಿ ರುಪಾಯಿ ಆದಾಯ ಬಂದಿದೆ. ಪ್ರತಿ ಷೇರು ಗಳಿಕೆ (ಇಪಿಎಸ್‌) ಯಲ್ಲೂ ಏರಿಕೆ ಕಂಡುಬಂದಿದ್ದು, ಷೇರು ಮಾರುಕಟ್ಟೆಯಲ್ಲಿ ಸಂಚಲನೆ ಹುಟ್ಟಿಸಿದೆ.

ಮುಂದಿನ ತ್ರೆೃಮಾಸಿಕದಲ್ಲಿ (ಜುಲೈ- ಸೆಪ್ಟೆಂಬರ್‌) 237 ದಶಲಕ್ಷದಿಂದ 239 ದಶಲಕ್ಷ ಡಾಲರ್‌ ನಿವ್ವಳ ಆದಾಯವನ್ನು ಕಂಪನಿ ನಿರೀಕ್ಷಿಸುತ್ತಿದೆ. ಒಟ್ಟಾರೆ ವರ್ಷದಲ್ಲಿ 966 ದಶಲಕ್ಷದಿಂದ 982 ದಶಲಕ್ಷ ಡಾಲರ್‌ನಷ್ಟು ಒಟ್ಟಾದಾಯ ಗಳಿಸುವುದು ಕಂಪನಿಯ ಗುರಿ.

ಷೇರು ಮಾರುಕಟ್ಟೆ ಜೋರು : ನಾಸ್ದಾಕ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಪಟ್ಟಿಯಲ್ಲಿ ನಮೂದಾಗಿರುವ ಬೆಂಗಳೂರು ಮೂಲಕ ಇನ್ಫೋಸಿಸ್‌ ಟೆಕ್ನಾಲಜೀಸ್‌ನ ಮೊದಲ ತ್ರೆೃಮಾಸಿಕದ ವಿತ್ತ ವರದಿ ಪ್ರಕಟವಾಗುತ್ತಿದ್ದಂತೆ ಮುಂಬಯಿ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಸಂಚಲನೆ ಉಂಟಾಗಿದೆ. ಶೇರು ಸೂಚ್ಯಂಕ ಗಣನೀಯ ಏರಿಕೆ ಕಂಡಿದ್ದು, ವಿದೇಶೀ ಬಂಡವಾಳದಾರರು ಷೇರುಗಳನ್ನು ಖದೀರಿಸಲು ಮುಗಿಬೀಳತೊಡಗಿದ್ದಾರೆ.

(ಏಜೆನ್ಸೀಸ್‌)

ಮುಖಪುಟ / ಐಟಿ - ಬಿಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+