ಭಾರತೀಯ ಐಟಿಗೆ ಸ್ಪರ್ಧೆಯಿಂದ ಪೆಟ್ಟು-ನಾಸ್‌ಕಾಮ್‌

ಬೆಂಗಳೂರು : ಜಾಗತಿಕ ಐಟಿ ಮಾರುಕಟ್ಟೆಯಲ್ಲಿ ಗ್ರಾಹಕರು ದೊಡ್ಡ ಪ್ರಮಾಣದ ಗುತ್ತಿಗೆಗಳನ್ನು ಮುಂದಿಡುವುದರಿಂದ ಮುಂದಿನ ಎರಡು ಮೂರು ವರ್ಷಗಳಲ್ಲಿ ಭಾರತೀಯ ಸಾಫ್ಟ್‌ವೇರ್‌ ಕಂಪೆನಿಗಳ ಲಾಭದ ಪ್ರಮಾಣ ತುಸು ಕಡಿಮೆಯಾಗಿರುತ್ತದೆ.

ಇನ್ನೆರಡು ವರ್ಷಗಳಲ್ಲಿ ಶೇ. 30ರಷ್ಟು ಲಾಭಾಂಶವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಅವೇನಿದ್ದರೂ ಶೇ. 20ರೊಳಗೇ ಇರುತ್ತದೆ ಎಂದು ನಾಸ್‌ಕಾಮ್‌(ಸಾಫ್ಟ್‌ವೇರ್‌ ಕಂಪೆನಿಗಳ ರಾಷ್ಟ್ರೀಯ ಸಂಸ್ಥೆ) ನ ಅಧ್ಯಕ್ಷ ಕಿರಣ್‌ ಕಾರ್ಣಿಕ್‌ ಮೇ 23ರ ಶುಕ್ರವಾರ ತಿಳಿಸಿದ್ದಾರೆ.

ಐಬಿಎಂನಂತಹ ಗತ್ತಿನ ಅತ್ಯಂತ ಪ್ರಸಿದ್ಧ ಐಟಿ ಕಂಪೆನಿಗಳು ಭಾರತದಲ್ಲಿ ಕೆಲಸ ಮಾಡಲು ಆರಂಭಿಸುವುದರಿಂದ ಸ್ಥಳೀಯ ಕಂಪೆನಿಗಳು ಸಹಜವಾಗಿಯೇ ತಮ್ಮ ಲಾಭಾಂಶದ ಮಾರ್ಜಿನ್‌ ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲದೆ ಗ್ರಾಹಕರು ದೀರ್ಘಾವಧಿಯ ದೊಡ್ಡ ಯೋಜನೆಗಳನ್ನು ಐಟಿ ಕಂಪೆನಿಗಳ ಮುಂದಿಡುತ್ತಾರೆ ಎಂದು ಕಾರ್ಣಿಕ್‌ ಹೇಳಿದರು. ಅವರು ಪ್ರೆಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಆಯೋಜಿಸಿದ್ದ ಮಾಧ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಮೂಲಭೂತ ಅಭಿವೃದ್ಧಿ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು.

ಐಬಿಎಂ ಈಗಾಗಲೇ ಭಾರತದಲ್ಲಿ 4, 700 ಮಂದಿಗೆ ಉದ್ಯೋಗ ನೀಡಿದೆ. ತನ್ನ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯನ್ನೂ ಅದು ಹೊಂದಿದೆ. ಆಕ್ಸೆಂಚರ್‌ ಕಂಪೆನಿಯೂ ತನ್ನ ಮುಂಬಯಿ ಮತ್ತು ಬೆಂಗಳೂರಿನ ಸಾಫ್ಟ್‌ವೇರ್‌ ಮತ್ತು ಕಾಲ್‌ ಸೆಂಟರ್‌ಗಳನ್ನು ಇನ್ನೆರಡು ವರ್ಷಗಳಲ್ಲಿ ಅಭಿವೃದ್ಧಿ ಪಡಿಸಲಿದೆ. ಈಗಾಗಲೇ ಆ್ಯಕ್ಸೆಂಚರ್‌ 2, 500 ಮಂದಿಗೆ ಉದ್ಯೋಗ ಕಲ್ಪಿಸಿದೆ. ಇದೇ ರೀತಿ ಇತರ ಐಟಿ ಕಂಪೆನಿಗಳೂ ವಿಸ್ತರಣೆಯಾದಂತೆಲ್ಲ ದೇಸೀ ಐಟಿ ಕಂಪೆನಿಗಳ ಲಾಭಾಂಶದಲ್ಲಿ ಇಳಿಕೆಯಾಗಲಿದೆ ಎಂದು ಕಿರಣ್‌ ಕಾರ್ಣಿಕ್‌ ಹೇಳಿದರು.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+