ಆರ್ಟಿಪಿಎಸ್ ಟ್ರಾನ್ಸ್‌ಫಾರ್ಮರ್ ಸ್ಫೋಟ, ವಿದ್ಯುತ್ ವ್ಯತ್ಯಯ
ರಾಯಚೂರು: ಆರ್ಟಿಪಿಎಸ್‌ನ ಟ್ರಾನ್ಸ್‌ಫಾರ್ಮರ್‌ಗಳು ಭಾನುವಾರ ಸ್ಫೋಟಗೊಂಡ ಪರಿಣಾಮ ರಾಜ್ಯದ ಆರು ಜಿಲ್ಲೆಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯಗೊಂಡಿದ್ದಲ್ಲದೆ ಈ ಸ್ಫೋಟದಿಂದ ಸುಮಾರು 1.2 ಕೋಟಿ ರೂಪಾಯಿ ನಷ್ಟವುಂಟಾಗಿದೆ.
ಉತ್ಪಾದಿತ ವಿದ್ಯುತ್ ಪೂರೈಕೆ ಮಾಡುವ ನಿಯಂತ್ರಕದಲ್ಲಿನ 220 ಕೆವಿ ಪೊಟೆನ್ಷಿಯಲ್ ಟ್ರಾನ್ಸ್‌ಫಾರ್ಮರ್ ಬೆಳಗ್ಗೆ 6.10ಕ್ಕೆ ಸ್ಫೋಟಗೊಂಡಿದ್ದು 20 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಕಡಿತಗೊಂಡಿತು. 220 ಕೆವಿ ಮಾರ್ಗದ ಪ್ರವಾಹ ಸೂಚಿ ಕೆಲಸ ನಿಲ್ಲಿಸುತ್ತಿದ್ದಂತೆಯೇ 1, 2 ಮತ್ತು 3ನೇ ಘಟಕಗಳ ಮೇಲೆ ಒತ್ತಡ ಹೆಚ್ಚಾಗಿ ಕೆಲಸ ಸ್ಥಗಿತಗೊಂಡಿತು. ಜೊತೆಗೆ ಕೇಂದ್ರಕ್ಕೆ ವಿದ್ಯುತ್ ಪೂರೈಸುತ್ತಿದ್ದ ನಾಲ್ಕನೇ ಘಟಕವೂ ಕೆಲಸ ನಿಲ್ಲಿಸಿತು.
ಭಾನುವಾರ ರಾತ್ರಿವೇಳೆಗೆ ದೋಷಗಳನ್ನು ಸರಿಪಡಿಸಲಾಯಿತು. ಸ್ಫೋಟಗೊಂಡ ಯಂತ್ರಕ್ಕೆ ಬದಲಾಗಿ ಸಂಗ್ರಹಿಸಿಟ್ಟ ಮತ್ತೊಂದು ಯಂತ್ರವನ್ನು ಜೋಡಿಸಲಾಗಿದೆ. ಅನಿರೀಕ್ಷಿತವಾಗಿ ನಡೆದ ಈ ಘಟನೆಯಿಂದ ದೊಡ್ಡ ಪ್ರಮಾಣದ ಹಾನಿಯಾಗಿದೆ ಎಂದು ರಾಯಚೂರು ವಿದ್ಯುತ್ ಉತ್ಪಾದನಾ ಕೇಂದ್ರದ ಅಧಿಕಾರಿಗಳು ವಿಷಾದಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications