ಸತ್ಯಂ ಕಂಪ್ಯೂಟರ್ಸ್‌ನ ಲಾಭದಲ್ಲಿ ಶೇ.1.8 ಇಳಿಕೆ
ನವದೆಹಲಿ : ಒಂದು ಕಾಲದಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನದ ನಂಬರ್ ಒನ್ ಕಂಪನಿಯಾಗಿದ್ದ ಸತ್ಯಂ ಕಂಪ್ಯೂಟರ್ಸ್ ನ ತ್ರೆೃಮಾಸಿಕದ ನಿವ್ವಳ ಲಾಭದಲ್ಲಿ 1.8 ಪ್ರತಿಶತ ಕುಸಿತ ಉಂಟಾಗಿದೆ.
ಡಿಸೆಂಬರ್ 31, 2002ಕ್ಕೆ ಮುಗಿದ ತ್ರೆೃಮಾಸಿಕ ಅವಧಿಯಲ್ಲಿ ಕಂಪನಿ 116.73 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. 2001ನೇ ಇಸವಿಯಲ್ಲಿ ಇದೇ ಅವಧಿಯಲ್ಲಿ ಕಂಪನಿ 199.43 ಕೋಟಿ ರುಪಾಯಿ ಲಾಭ ಗಳಿಸಿತ್ತು. ನಿವ್ವಳ ಆದಾಯದಲ್ಲಿ 16.8 ಪ್ರತಿಶತ ಹೆಚ್ಚಳವಾಗಿರುವುದು ಕಂಪನಿಗೆ ಸಮಾಧಾನದ ಸಂಗತಿ. ಡಿಸೆಂಬರ್ 31, 2001ಕ್ಕೆ ಮುಗಿದ ತ್ರೆೃಮಾಸಿಕದಲ್ಲಿ ಕಂಪನಿ 446 ಕೋಟಿ ರುಪಾಯಿ ನಿವ್ವಳ ಆದಾಯ ಗಳಿಸಿತ್ತು. ಆದರೀಗ ನಿವ್ವಳ ಆದಾಯ 521.5 ಕೋಟಿ ರುಪಾಯಿಯಷ್ಟಾಗಿದೆ.
ಸತ್ಯಂ ಕಂಪ್ಯೂಟರ್ಸ್‌ನ ಅಧ್ಯಕ್ಷ ಬಿ.ರಾಮಲಿಂಗ ರಾಜು ಕಂಪನಿಯ ಲಾಭ ತಗ್ಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಕೆಲವು ಗ್ರಾಹಕರ ಚೌಕಾಸಿ ವ್ಯವಹಾರ ಹಾಗೂ ಬಹು ಕೋಟಿ ಡಾಲರ್‌ನ ಒಂದು ಕೆಲಸ ದೊರೆಯಲು ಆಗುತ್ತಿರುವ ವಿಳಂಬವೇ ಕಂಪನಿಯ ನಿವ್ವಳ ಲಾಭ ಕುಸಿಯಲು ಕಾರಣ ಎಂದು ಅವರು ಸಮಜಾಯಿಸಿ ಕೊಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ











Click it and Unblock the Notifications