ವಿವಾದಿತ ಕ್ಯಾಂಪ್ಕೊ ಚುನಾವಣೆಯಲ್ಲಿ ಬಿಜೆಪಿ ಗೆಲುವು
ಮಂಗಳೂರು : ಅಡಿಕೆ ಕೃಷಿಕರ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಲ್ಲ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
12 ಮಂದಿ ನಿರ್ದೇಶಕರ ಸ್ಥಾನಕ್ಕೆ ಡಿ. 30ರಂದು ನಡೆದ ಚುನಾವಣೆ ಫಲಿತಾಂಶ ಜ.22ರ ಬುಧವಾರ ಪ್ರಕಟಗೊಂಡಿದ್ದು, ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ 12 ಮಂದಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಫಲಿತಾಂಶ ಘೋಷಣೆಗೆ ತಡೆಯಾಜ್ಞೆ ಬಂದ ಹಿನ್ನೆಲೆಯಲ್ಲಿ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ತಡವಾಗಿತ್ತು.
ಅಕ್ರಮ ಮತದಾನ
ಕ್ಯಾಂಪ್ಕೋ ಚುನಾವಣೆ ಅಕ್ರಮವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ. ಸಂಸ್ಥೆಯ ಎಲ್ಲ 75 ಸಾವಿರ ಶೇರು ಹೂಡಿಕೆದಾರರಿಗೆ ಮತದಾನದ ಅವಕಾಶವನ್ನು ನೀಡದೆ ಪ್ರಜಾಪ್ರಭುತ್ವ ವ್ಯವಸ್ಥೆ ಗೆ ಅಪಚಾರವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬ್ಲೇಸಿಯಸ್ ಎಂ. ಡಿ ’ಸೋಜ ಆರೋಪಿಸಿದ್ದಾರೆ.
75 ಸಾವಿರ ಮಂದಿ ಸದಸ್ಯರಿರುವ ಕ್ಯಾಂಪ್ಕೋ ಸಂಸ್ಥೆಯಲ್ಲಿ ಕೇವಲ 29 ಸಾವಿರ ಮಂದಿಗೆ ಮಾತ್ರ ಮತದಾನದ ಹಕ್ಕನ್ನು ನೀಡಲಾಗಿದೆ. ಆದ್ದರಿಂದ ಇದನ್ನು ನ್ಯಾಯಾಂಗದ ಮುಂದಿಟ್ಟು 75 ಸಾವಿರ ಶೇರು ಹೂಡಿಕೆದಾರರಿಗೂ ಮತದಾನದ ಹಕ್ಕು ದೊರಕಿಸಿಕೊಡುವಂತೆ ಹೋರಾಟ ನಡೆಸಲಾಗುವುದು ಎಂದು ಡಿಸೋಜ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...











Click it and Unblock the Notifications