ಫೆ.5ರಿಂದ 9ರವರೆಗೆ ಯಲಹಂಕದಲ್ಲಿ ‘ಏರೋ ಇಂಡಿಯಾ’

ಬೆಂಗಳೂರು : ರಕ್ಷಣಾ ಇಲಾಖೆ ಪ್ರತಿವರ್ಷ ಆಯೋಜಿಸುವ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ’ದ ಈ ವರ್ಷದ ಕಂತು ಫೆಬ್ರವರಿ 5ರಿಂದ 6ನೇ ತಾರೀಕಿನವರೆಗೆ ಯಲಹಂಕದ ವಾಯುಪಡೆ ಮೈದಾನದಲ್ಲಿ ನಡೆಯಲಿದೆ.

ಫೆಬ್ರವರಿ 5ನೇ ತಾರೀಕು ಬೆಳಗ್ಗೆ 10 ಗಂಟೆಗೆ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸೇರಿದಂತೆ ಅನೇಕ ಗಣ್ಯರು ಪ್ರದರ್ಶನ ನೋಡಲಿದ್ದಾರೆ. ಯಲಹಂಕ ವಾಯುಪಡೆ ಮೈದಾನದಲ್ಲಿ ರಕ್ಷಣಾಧಿಕಾರಿಗಳು ಪ್ರದರ್ಶನದ ಪೂರ್ವ ಸಿದ್ಧತೆಯಲ್ಲಿ ಈಗಾಗಲೇ ತೊಡಗಿದ್ದಾರೆ.

ದೇಶೀ ಮತ್ತು ವಿದೇಶೀ ಯುದ್ಧ ವಿಮಾನಗಳು ಹಾಗೂ ವಸ್ತು ಪ್ರದರ್ಶನವನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ. ಫೆ. 5, 6 ಮತ್ತು 7ನೇ ತಾರೀಕು ವಾಣಿಜ್ಯ ಉದ್ದೇಶಕ್ಕಾಗಿ ಈ ಪ್ರದರ್ಶನಕ್ಕೆ ಪ್ರವೇಶವಿದೆ. ಟಿಕೆಟ್‌ ದರ 400 ರುಪಾಯಿ. ಫೆ. 8 ಮತ್ತು 9ನೇ ತಾರೀಕು ಸಾರ್ವಜನಿಕರಿಗೆ ವೈಮಾನಿಕ ಪ್ರದರ್ಶನ ವೀಕ್ಷಿಸುವ ಮುಕ್ತ ಅವಕಾಶವಿದ್ದು, 200 ರುಪಾಯಿ ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ. ಬೆಂಗಳೂರಿನ ನಿಗದಿತ ಕೆನರಾ ಬ್ಯಾಂಕುಗಳಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುವುದು. ಚಿಕ್ಕ ಮಕ್ಕಳಿಗೆ ಪ್ರದರ್ಶನಕ್ಕೆ ಪ್ರವೇಶವಿಲ್ಲ. 5 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳಿಗೂ ಪೂರ್ತಿ ದರ ಕೊಟ್ಟು ಟಿಕೇಟು ಖರೀದಿಸಬೇಕು ಎಂದು ಏರೋ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+