ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಬಿ.ಎಸ್.ಪಾಟೀಲ್
ಬೆಂಗಳೂರು : ಅಭಿವೃದ್ಧಿ ಆಯುಕ್ತ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ನಿಯೋಜಿತರಾಗಿದ್ದಾರೆ.
ಪ್ರಸ್ತುತ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿರುವ ಡಾ.ಎ.ರವೀಂದ್ರ ಅವರ ಅಧಿಕಾರಾವಧಿ ಡಿ.31ಕ್ಕೆ ಕೊನೆಗೊಳ್ಳಲಿದ್ದು , ರವೀಂದ್ರ ಅವರ ಸ್ಥಾನವನ್ನು ಬಿ.ಎಸ್.ಪಾಟೀಲ್ ತುಂಬಲಿದ್ದಾರೆ. ಪಾಟೀಲ್ ಅವರಿ ಸೇವಾವಧಿ 13 ತಿಂಗಳು ಬಾಕಿಯಿದೆ.
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಬಾಬುಗೌಡ ಸಂಗನಗೌಡ ಪಾಟೀಲ್ ಅವರು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ, ಪಾಟೀಲ್ ಪಟೇಲರ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2001 ರ ಅಕ್ಟೋಬರ್ 31 ರಂದು ಅಪರ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಬಡ್ತಿ ಪಡೆದಿದ್ದ ಅವರು, 2002ರ ಜೂನ್ 30 ರಲ್ಲಿ ಅಭಿವೃದ್ಧಿ ಆಯುಕ್ತರಾಗಿ ನೇಮಕಗೊಂಡಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications