ವಾಜಪೇಯಿ ಬರ್ತಡೇಗೆ ‘72 ತಾಸು ಯಜ್ಞ’ದ ಕೊಡುಗೆ !
ನವದೆಹಲಿ : ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೆ ಕ್ರಿಸ್‌ಮಸ್ ದಿನ (ಡಿ.25) 78 ವರ್ಷ ತುಂಬುತ್ತದೆ. ಅವರು ನೂರ್ಕಾಲ ಬದುಕಲೆಂದು ಸ್ಥಳೀಯ ಸಾಮಾಜಿಕ ಸಂಸ್ಥೆಯಾಂದು 72 ತಾಸುಗಳ ಯಜ್ಞ ಮಾಡಲಿದೆ.
ಸಂಸ್ಥೆಯವರು ಹೇಳುವ ಪ್ರಕಾರ ಪ್ರಧಾನಿ ಹುಟ್ಟುಹಬ್ಬಕ್ಕೆ ಇದೊಂದು ಅನನ್ಯ ಕೊಡುಗೆ. ಒಂದು ದಿನದ ಬರ್ತಡೇ ನೆಪದಲ್ಲಿ ಮೂರು ದಿನಗಳ ಕಾಲ ಯಜ್ಞ ಅಂದರೆ ತಮಾಷೀನಾ? ದೇಶದ ದೊಡ್ಡಾತಿದೊಡ್ಡ ಪುರೋಹಿತರು ಈ ಯಜ್ಞ ನಡೆಸಲಿದ್ದಾರೆ. ವಾಜಪೇಯಿ ಅವರಿಗೆ ದೀರ್ಘಾಯಸ್ಸು ದೊರಕಿಸಿ ಕೊಡುವುದಷ್ಟೇ ಅಲ್ಲದೆ, ಜಾಗತಿಕ ಭಯೋತ್ಪಾದನೆ ನಿರ್ಮೂಲನ ಮಾಡಲೂ ಈ ಯಜ್ಞದಿಂದ ಸಾಧ್ಯವಿದೆಯಂತೆ !
ಒಂದೆಡೆ ದೀರ್ಘ ಕಾಲಿಕ ಯಜ್ಞ ನಡೆದರೆ, ಇನ್ನೊಂದೆಡೆ ನಿರಂತರ ಜಪ ಕೂಡ ನಡೆಸಲು ಸಂಸ್ಥೆ ನಿರ್ಧರಿಸಿದೆ. ಈ ಯಜ್ಞಕ್ಕೆ ವಾಜಪೇಯಿ ಹಾಜರಾಗುತ್ತಾರೋ ಇಲ್ಲವೋ ಇನ್ನೂ ಗೊತ್ತಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications