ಪುಣೆ ಫಿಲ್ಮ್ ಇನ್ಸ್‌ಟಿಟ್ಯೂಟ್ ಅಧ್ಯಕ್ಷರಾಗಿ ಅನಂತಮೂರ್ತಿ
ಬೆಂಗಳೂರು : ಪ್ರತಿಷ್ಠಿತ ಪುಣೆ ಭಾರತೀಯ ಫಿಲ್ಮ್ ಇನ್ಸ್‌ಟಿಟ್ಯೂಟ್ ಅಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡಿಗ ಡಾ.ಯು.ಆರ್.ಅನಂತಮೂರ್ತಿ ಆಯ್ಕೆಯಾಗಿದ್ದಾರೆ.
ಪುಣೆಯಲ್ಲಿನ ಅಂತರರಾಷ್ಟ್ರೀಯ ಖ್ಯಾತಿಯ ಭಾರತೀಯ ಚಲನಚಿತ್ರ ಹಾಗೂ ಟೀವಿ ಶಿಕ್ಷಣ ಸಂಸ್ಥೆ (ಎಫ್‌ಟಿಐಐ) ಸಂಸ್ಥೆಯ ಅಧ್ಯಕ್ಷರಾಗಿ ಅನಂತಮೂರ್ತಿ ಅವರ ನೇಮಕದ ಆದೇಶವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಶುಕ್ರವಾರ(ಡಿ.20) ಹೊರಡಿಸಿದರು.
ಈ ಮುನ್ನ ಕನ್ನಡದ ಮತ್ತೊಬ್ಬ ಜ್ಞಾನಪೀಠಿ ಗಿರೀಶ್ ಕಾರ್ನಾಡ್ ಅವರು ಎಫ್‌ಟಿಐಐ ನಿರ್ದೇಶಕರಾಗಿದ್ದರು.
ಅನಂತಮೂರ್ತಿ ಸಂತಸ : ಚಲನಚಿತ್ರ ಹಾಗೂ ಟೀವಿ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಪ್ರತಿಷ್ಠಿತ ಸಂಸ್ಥೆಯಾದ ಎಫ್‌ಟಿಐಐ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಅನಂತಮೂರ್ತಿ ಸಂತಸ ವ್ಯಕ್ತಪಡಿಸಿದ್ದಾರೆ. ಒಬ್ಬ ಲೇಖಕನಾಗಿ ನಾನು ನನ್ನದೇ ಆದ ನಿಲುವುಗಳನ್ನು ಹೊಂದಿದ್ದೇನೆ. ಪ್ರಸ್ತುತ ನಮ್ಮ ಮುಂದಿರುವ, ಪ್ರತಿಯಾಂದೂ ವಾಣಿಜ್ಯೀಕರಣಗೊಳ್ಳದಂತೆ ತಡೆಯುವ ಸವಾಲನ್ನು ನಿಭಾಯಿಸಲು ಪ್ರಯತ್ನಿಸುತ್ತೇನೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಹಾಗೂ ನ್ಯಾಷನಲ್ ಬುಕ್‌ಟ್ರಸ್ಟ್ ಅಧ್ಯಕ್ಷರಾಗಿ ಅನಂತಮೂರ್ತಿ ಅವರು ಈ ಮುನ್ನ ಕರ್ತವ್ಯ ನಿರ್ವಹಿಸಿದ್ದರು.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications