ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು : ಸ್ವಚ್ಛ ಗಾಳಿಗೆ ನಾಗರಿಕರ ರಾತ್ರಿ ಪರದಾಟ

By Staff
|
Google Oneindia Kannada News

ಮಂಗಳೂರು : ನಗರದ ಮಂಗಳೂರು ಕೆಮಿಕಲ್ಸ್‌ ಫರ್ಟಿಲೈಸರ್ಸ್‌ ಕಂಪೆನಿ ಹಾಗೂ ಎಂಆರ್‌ಪಿಎಲ್‌ ನಡುವಿನ ಪೈಪ್‌ಲೈನ್‌ನಲ್ಲಿ ಸೋರುವಿಕೆ ಕಂಡು ಬಂದಿದ್ದು ದುರ್ವಾಸನೆಯಿಂದಾಗಿ ಕಂಪೆನಿಯ ಆಸುಪಾಸಿನ ನಿವಾಸಿಗಳು ಭಾನುವಾರ ಅಪರಾತ್ರಿಯಲ್ಲಿ ಸ್ವಚ್ಛ ಗಾಳಿ ಇಲ್ಲದೆ ತೊಂದರೆ ಪಡುವಂತಾಯಿತು.

ಭಾನುವಾರ ಅಪರಾತ್ರಿಯಲ್ಲಿ ಪೈಪ್‌ಲೈನ್‌ ನಡುವೆ ಸೋರಿಕೆ ಕಂಡು ಬಂದಿದ್ದು ಸೋಮವಾರ ಮುಂಜಾನೆ ಹೊತ್ತಿಗೆ ಎಂಆರ್‌ಪಿಎಲ್‌ ಹಾಗೂ ಎಂಸಿಎಫ್‌ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಇಂಜಿನಿಯರುಗಳು ಪೈಪ್‌ಲೈನ್‌ನ ಬಿರುಕನ್ನು ಸರಿಪಡಿಸಿ ಸೋರಿಕೆಯನ್ನು ತಡೆದರು ಎಂದು ಸೋಮವಾರ ಪಿಟಿಐ ವರದಿ ಮಾಡಿದೆ.

ಪೈಪ್‌ ಲೈನ್‌ ಸೋರುವಿಕೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ. ಆದಾಗ್ಯೂ ಎಂಸಿಎಫ್‌ ಕಂಪೆನಿಯ ಆಸುಪಾಸಿನಲ್ಲಿ ಸೋರಿಕೆ ಕಂಡು ಬಂದಿಲ್ಲ ಎಂದು ಎಂಸಿಎಫ್‌ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಈ ಹಿಂದೆ ಎಂಆರ್‌ಪಿಎಲ್‌ ಪೈಪ್‌ ಲೈನ್‌ ಸೋರಿಕೆಯಿಂದ ಕುಡಿಯುವ ನೀರು ಕಲುಷಿತಗೊಂಡಿತ್ತು ಹಾಗೂ ಬೆಳೆಗಳೂ ಹಾನಿಗೊಂಡಿದ್ದವು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X