ಏಡ್ಸ್ ರೋಗಿಯ ಗರ್ಭದ ಶಿಶುವಿಗೆ ರೋಗದಿಂದ ರಕ್ಷೆ!
ಮಂಗಳೂರು: ಏಡ್ಸ್ ರೋಗ ಪೀಡಿತ ಮಹಿಳೆ ಗರ್ಭಿಣಿಯಾಗಿದ್ದಲ್ಲಿ ಆಕೆಯ ಮಗುವಿಗೆ ಏಡ್ಸ್ ಬಾರದಂತೆ ತಡೆಗಟ್ಟುವುದು ಸಾಧ್ಯ ಎಂದು ಭಾರತೀಯ ಮಕ್ಕಳ ಅಕಾಡೆಮಿ ರಾಜ್ಯ ಶಾಖೆಯ ಅಧ್ಯಕ್ಷ ಡಾ. ಬಿ. ಭಾಸ್ಕರ್ ತಿಳಿಸಿದ್ದಾರೆ.
ಗರ್ಭಿಣಿ ಸ್ತ್ರೀಯರು ಏಡ್ಸ್ ರೋಗ ಹೊಂದಿದ್ದರೂ ಅದು ಮಕ್ಕಳಿಗೆ ವರ್ಗಾವಣೆಯಾಗದಂತೆ ತಡೆಯಬಹುದು. ಸೂಕ್ತ ಚಿಕಿತ್ಸೆಯ ಮೂಲಕ ರೋಗವು ಹೊಟ್ಟೆಯಲ್ಲಿರುವ ಮಗುವಿಗೆ ವರ್ಗಾವಣೆಯಾಗದ ಹಾಗೆ ಮಾಡಬಹುದು. ಈ ಹೊಸ ತಂತ್ರಜ್ಞಾನದ ಬಗ್ಗೆ ಮಕ್ಕಳ ತಜ್ಞರಿಗೆ ಹೆಚ್ಚಿನ ತರಬೇತಿ ನೀಡಬೇಕಾಗಿದೆ. ಇದಕ್ಕಾಗಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗುವುದು ಎಂದು ಭಾಸ್ಕರ್ ಹೇಳಿದ್ದಾರೆ. ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಭಯಾನಕವಾಗಿರುವ ಏಡ್ಸ್ ರೋಗದ ಕುರಿತು ವೈದ್ಯರಿಗೂ ತೀರಾ ಭಯವಿದೆ. ಏಡ್ಸ್ ರೋಗಿಯ ಆರೈಕೆಯನ್ನು ವೈದ್ಯರು, ದಾದಿಯರ ಬಳಿಯೇ ಮಾಡಿಸುತ್ತಾರೆ. ಆದರೆ ಆರೈಕೆ ಮಾಡುವುದರಿಂದ ರೋಗ ಹರಡುವುದಿಲ್ಲ ಎಂಬುದನ್ನು ಎಲ್ಲರೂ ತಿಳಿದಿರಬೇಕು ಎಂದು ಭಾಸ್ಕರ್ ಸಲಹೆ ಮಾಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications