ಹುಬ್ಬಳ್ಳಿ ಪೊಲೀಸರಿಂದ 1080 ಕೇಜಿ ಗಾಂಜಾ ವಶ
ಹುಬ್ಬಳ್ಳಿ : ಮಾದಕ ವಸ್ತು ಸರಬರಾಜಿನ ಭಾರೀ ಜಾಲವನ್ನು ಪತ್ತೆ ಹಚ್ಚಿರುವ ಹುಬ್ಬಳ್ಳಿ ನಗರ ಪೊಲೀಸರು, ಮಾರುಕಟ್ಟೆಯಲ್ಲಿ 20 ಲಕ್ಷ ರುಪಾಯಿ ಬೆಲೆ ಬಾಳುವ 1080 ಕೇಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
1080 ಕೇಜಿ ಗಾಂಜಾ ವಶಪಡಿಸಿಕೊಂಡಿರುವ ಹುಬ್ಬಳ್ಳಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಮೂವರನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಕಮೀಷನರ್ ಗಗನ್‌ದೀಪ್ ಸುದ್ದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಂಧ್ರ ಪ್ರದೇಶದಿಂದ ತಂದಿದ್ದ ಈ ಗಾಂಜಾವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ವಿತರಿಸಲು ಬಂಧಿತ ಆರೋಪಿಗಳು ಯೋಜಿಸಿದ್ದರು ಎಂದು ಗಗನ್‌ದೀಪ್ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಲಾರಿ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications