ಬಳ್ಳಾರಿಯಲ್ಲಿ ಕುಡಿಯುವ ನೀರಿನ ತುಂಬ ಕೀಟಾಣು
ಬಳ್ಳಾರಿ: ಬಳ್ಳಾರಿ ತಾಲ್ಲೂಕು ಕೇಂದ್ರಕ್ಕೆ ಮುನ್ಸಿಪಾಲಿಟಿಯಿಂದ ಸರಬರಾಜಾಗುತ್ತಿರುವ ಕುಡಿಯುವ ನೀರಿನ ತುಂಬ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. ಕುಡಿಯುವ ನೀರಿನ ಪರಿಶುದ್ಧತೆಯ ಬಗ್ಗೆ ನಡೆಸಿದ ಅಧ್ಯಯನದ ಮೂಲಕ ಈ ವಿಷಯ ಹೊರಬಿದ್ದಿದೆ.
ನಗರದಲ್ಲಿ ಲಕ್ಷಾಂತರ ಮಂದಿ ಮುನ್ಸಿಪಾಲಿಟಿಯ ನೀರನ್ನು ಬಳಸುತ್ತಿದ್ದಾರೆ. ನಗರದಲ್ಲಿರುವ ಆಸ್ಪತ್ರೆಗೂ ಮುನ್ಸಿಪಾಲಿಟಿಯೇ ನೀರು ಸರಬರಾಜು ಮಾಡುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದ ಬಗ್ಗೆಯೂ ವೈದ್ಯರು ಆತಂಕ ವ್ಯಕ್ತಪಡಿಸುವಂತಾಗಿದೆ.
ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ ಸರ್ವೇಕ್ಷಣಾ ಘಟಕ ನಡೆಸಿದ ಅಧ್ಯಯನದಲ್ಲಿ ಕುಡಿಯುವ ನೀರಿನಲ್ಲಿ ಮಿತಿಗಿಂತ ಹೆಚ್ಚು ಬ್ಯಾಕ್ಟೀರಿಯಾಗಳು ಇದ್ದುದು ತಿಳಿದುಬಂದಿದೆ. ನೀರಿನ ಶುದ್ಧತೆಯ ಪರೀಕ್ಷೆಗೆ ನಗರದ ಎಲ್ಲ ಕಡೆಗಳಲ್ಲಿ ಬಳಸುವ ಮುನ್ಸಿಪಾಲಿಟಿಯಿಂದ ಸರಬರಾಜಾಗುವ ನೀರಿನ ಸ್ಯಾಂಪಲ್‌ಗಳನ್ನು ತೆಗೆದುಕೊಳ್ಳಲಾಗಿತ್ತು.
ಪರೀಕ್ಷಾ ಸಂದರ್ಭದಲ್ಲಿ ನೀರಿನಲ್ಲಿ ಬ್ಯಾಕ್ಟೀರಿಯಾಗಳು ಮಾತ್ರವಲ್ಲದೆ, ಕ್ಲೋರಿನ್ ಅಂಶವೂ ಕಂಡು ಬಂದಿದೆ. ಈ ವರದಿಯ ಬಗ್ಗೆ ಮುನ್ಸಿಪಾಲಿಟಿ ಅಧಿಕಾರಿಗಳು ಮತ್ತು ಆಯುಕ್ತರ ಪ್ರತಿಕ್ರಿಯೆ ಇನ್ನೂ ದೊರೆತಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications