ಧೀರ್ಘ ಕಾಲದ ಮೌನದ ನಂತರ ಅಡಿಕೆ ಮಾರುಕಟ್ಟೆ ಪುನರಾರಂಭ
ಶಿವಮೊಗ್ಗ : 80 ದಿನಗಳ ಬಳಿಕ ಅಡಿಕೆ ವ್ಯಾಪಾರ ಮತ್ತೆ ಆರಂಭವಾಗಿದ್ದು ಅಡಿಕೆ ಬೆಳೆಗಾರರಲ್ಲಿ ತುಸು ಭರವಸೆ ಮೂಡಿದೆ.
ಅಡಿಕೆ ಧಾರಣೆಯಲ್ಲಿ ತೀವ್ರ ಕುಸಿತ ಕಾಣಬಹದು ಎಂಬ ಭಯದಲ್ಲಿದ್ದ ರೈತರಿಗೆ ಸೋಮವಾರ ದಾಖಲಾದ ಧಾರಣೆ ನಿರಾಶೆ ಉಂಟುಮಾಡಲಿಲ್ಲ. ಸರಕು ಅಡಿಕೆಗೆ 8,600 ರೂಪಾಯಿಯಿಂದ 13, 296 ರೂಪಾಯಿವರಗೆ ಹಾಗೂ ಬೆಟ್ಟೆ 7, 400ರಿಂದ 10,299ರೂಪಾಯಿವರೆಗೆ ದಾಖಲಾಗಿದೆ. ಆದರೆ ಇದೇ ಧಾರಣೆ ಇನ್ನಷ್ಟು ದಿನಗಳವರೆಗೆ ಮುಂದುವರೆಯಬಹುದು ಎಂಬ ಬಗ್ಗೆ ರೈತರಲ್ಲಿ ವಿಶ್ವಾಸವಿಲ್ಲ.
ಸೋಮವಾರದ ಅಡಿಕೆ ವಹಿವಾಟಿನಲ್ಲಿ ಸೀಮಿತ ವರ್ತಕರು ಮಾತ್ರ ಪಾಲ್ಗೊಂಡಿದ್ದರು. ಗುಟ್ಕಾವನ್ನು ಹೊರತುಪಡಿಸಿದಂತಹ ದಕ್ಷಿಣಭಾರತದ ಮಾರುಕಟ್ಟೆಗೆ ಅಡಿಕೆ ಪೂರೈಸುತ್ತಿದ್ದ ವರ್ತಕರಷ್ಟೇ ವಹಿವಾಟು ನಡೆಸಿದರು. ಇದರಿಂದ ಬೆಳೆಗಾರರು ಅಡಿಕೆ ಮಾರುಕಟ್ಟೆಯ ಭವಿಷ್ಯದ ಬಗ್ಗೆ ಮತ್ತಷ್ಟು ಆತಂಕಗೊಳ್ಳುವಂತಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications