‘ಸದ್ಯದಲ್ಲೇ ರಾಜ್ಯದ 220 ಸಬ್ ರಿಜಿಸ್ಟ್ರಾರ್ ಕಚೇರಿ ಗಣಕೀಕರಣ’
ಬೆಂಗಳೂರು : ಲಂಚಗುಳಿತನಕ್ಕೆ ಮಂಗಳ ಹಾಡಲು ರಾಜ್ಯದ 220 ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ಸದ್ಯದಲ್ಲೇ ಗಣಕೀಕರಿಸಲು ಸರ್ಕಾರ ನಿರ್ಧರಿಸಿದೆ.
ಮುಖ್ಯ ಕಾರ್ಯದರ್ಶಿ ಎ.ರವೀಂದ್ರ ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ಗಣಕೀಕೃತಗೊಳಿಸುವುದರಿಂದ ಕ್ಷಿಪ್ರ ನೋಂದಣಿಯಾಗುವುದರ ಜೊತೆಗೆ ಸುಳ್ಳು ದಾಖಲೆಯ ಸೃಷ್ಟಿ ಮಾಡುವವರನ್ನು ಮಟ್ಟ ಹಾಕುವುದು ಸಾಧ್ಯವಿದೆ. ದುಡ್ಡು ನುಂಗುವ ಗುರುಮ ಘಾತುಕರಿಗೆ ಪಾಠ ಕಲಿಸುವುದೂ ಸುಲಭವಾಗುತ್ತದೆ ಎಂದು ರವೀಂದ್ರ ಹೇಳಿದರು.
ನಾಗರಿಕರೊಡನೆ ಹೆಚ್ಚು ಸಂಪರ್ಕ ಇಟ್ಟುಕೊಂಡಿರುವ ಸರ್ಕಾರಿ ಇಲಾಖೆಗಳು, ಅದರಲ್ಲೂ ವಿಶೇಷವಾಗಿ ಪೊಲೀಸ್ ಮತ್ತು ಸಾರಿಗೆ ಇಲಾಖೆಗಳನ್ನು ಆದಷ್ಟು ಬೇಗ ಪೂರ್ಣ ಪ್ರಮಾಣದಲ್ಲಿ ಗಣಕೀಕೃತಗೊಳಿಸುವ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದೆ. ಆಗಸ್ಟ್ ಹೊತ್ತಿಗೆ ಈ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications